ಮೊಹರಂ ಆಚರಣೆ ವೇಳೆ ವಿದ್ಯುತ್ ಅವಘಡ: ಇಬ್ಬರು ಸಾವು

Prasthutha|

ರಾಯಚೂರು: ಮೊಹರಂ ಆಚರಣೆ ವೇಳೆ ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರ ಗ್ರಾಮದಲ್ಲಿ ನಡೆದಿದೆ.

- Advertisement -

ಇಂದು ಬೆಳಗಿನ ಜಾವ 5:30 ಸುಮಾರಿಗೆ ಘಟನೆ ನಡೆದಿದ್ದು, ಹಸೇನಸಾಬ್ ಮುಲ್ಲಾ (55), ಹುಲಿಗೆಮ್ಮ ( 25 ) ಮೃತ ದುರ್ದೈವಿಗಳು.

ಮೊಹರಂ ನಿಮಿತ್ತ ಸಂತೆಕೆಲ್ಲೂರಿನಿಂದ ದಾದನದೊಡ್ಡಿಗೆ ದೇವರುಗಳು ಭೇಟಿ ನೀಡುವ ವೇಳೆ ಘಟನೆ ನಡೆದಿದೆ.

- Advertisement -

ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Join Whatsapp