ರಸ್ತೆ ದಾಟುತ್ತಿದ್ದ ವೇಳೆ BMTC ಬಸ್‌ ಡಿಕ್ಕಿ: ಇಬ್ಬರು ಯುವಕರು ಮೃತ್ಯು

Prasthutha|

ಬೆಂಗಳೂರು: ಬಿಎಂಟಿಸಿ ಬಸ್‌ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಯುವಕರಿಬ್ಬರು ಮೃತಪಟ್ಟ ಘಟನೆ ಲಗ್ಗೆರೆಯ ರಿಂಗ್ ರಸ್ತೆಯ ಕೆಂಪೇಗೌಡ ಆರ್ಚ್ ಬಳಿ ನಡೆದಿದೆ.

- Advertisement -

ಮೃತಪಟ್ಟ ಓರ್ವ ಯುವಕನನ್ನು ಸುರೇಶ್​ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಯುವಕನ ಗುರುತು ಪತ್ತೆ ಆಗಿಲ್ಲ.

ಘಟನಾ ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Join Whatsapp