ಮಂಗಳೂರು : ಲಿಂಬೆ ಹಣ್ಣು ಸಾಗಾಟ ವಾಹನದಲ್ಲಿ 40 ಕೆಜಿ ಗಾಂಜಾ ಪತ್ತೆ

Prasthutha|

ಮಂಗಳೂರು: ಆಂಧ್ರದಿಂದ ಕಾಸರಗೋಡಿಗೆ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

- Advertisement -

ಖಚಿತ ಮಾಹಿತಿ ಮೇರೆಗೆ ಕೊಟ್ಟಾರ ಚೌಕಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸಿದಾಗ ಪೋಲಿಸರು ಲಿಂಬೆ ಹಣ್ಣು ಸಾಗಾಟ ವಾಹನದಲ್ಲಿ ಗಾಂಜಾ ಇರುವುದು ಬೆಳಕಿಗೆ ಬಂದಿದೆ. ತಪಾಸಣೆ ವೇಳೆ 40 ಕೆಜಿ ಗಾಂಜಾ ಪತ್ತೆಯಾಗಿದೆ.

ಬಂಧಿತರು ಕಾಸರಗೋಡು ಮೂಲದ ಶಿಹಾಬುದ್ದೀನ್ (32), ಲತೀಫ್ (38) ಎಂದು ಹೇಳಲಾಗಿದೆ. ಪಿಕಪ್ ಸೇರಿ 20 ಪ್ಯಾಕೇಟ್ ನ 4೦ ಕೆಜಿ ಗಾಂಜಾ ಹಾಗೂ ಒಟ್ಟು 11 ಲಕ್ಷ 17 ಸಾವಿರ ಮೌಲ್ಯದ ವಸ್ತುಗಳು ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂದು ಮಂಗಳೂರು ಪೊಲೀಸ್ ಡಿಸಿಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.



Join Whatsapp