ನ್ಯಾಯಾಲಯಕ್ಕೆ ಗಾಲಿಕುರ್ಚಿಯಲ್ಲಿ ಹಾಜರಾಗುತ್ತಿದ್ದ ಪ್ರಜ್ಞಾ ಸಿಂಗ್ ಬಾಸ್ಕೆಟ್ ಬಾಲ್ ಆಡಿದಾಗ…!

Prasthutha|

ಹೊಸದಿಲ್ಲಿ: 2008 ರ ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಬಾಸ್ಕೆಟ್‌ ಬಾಲ್ ಆಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

- Advertisement -

ಪ್ರಜ್ಞಾ ಸಿಂಗ್ ಠಾಕೂರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದುದರಿಂದ 2017 ರಲ್ಲಿ NIA ವಿಶೇಷ ನ್ಯಾಯಾಲಯ ಜಾಮೀನು ನೀಡಿತ್ತು. ಕಳೆದ ಮಾರ್ಚ್‌ನಲ್ಲಿ ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಉಸಿರಾಟದ ತೊಂದರೆಯುಂಟಾಗಿ ಅವರನ್ನು ಮುಂಬೈಯಿಂದ ದೆಹಲಿಗೆ ಕರೆದೊಯ್ಯಲಾಗಿತ್ತು. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಇದೇ ರೀತಿಯ ರೋಗಲಕ್ಷಣಗಳಿಂದಾಗಿ ಸಂಸದೆಯನ್ನು ದೆಹಲಿ ಏಮ್ಸ್ ಗೆ ದಾಖಲಿಸಲಾಗಿತ್ತು. ನಂತರ ಅವರು ನ್ಯಾಯಾಲಯಕ್ಕೆ ಗಾಲಿಕುರ್ಚಿಯಲ್ಲಿಯೇ ಹಾಜರಾಗುತ್ತಿದ್ದರು.

ವೀಡಿಯೋ ವೀಕ್ಷಿಸಿ….

- Advertisement -

ಆದರೆ ವೈರಲಾಗಿರುವ ವಿಡಿಯೋದಲ್ಲಿ ಬಿಜೆಪಿ ನಾಯಕಿಗೆ ಇಂತಹ ಆರೋಗ್ಯ ಸಮಸ್ಯೆಗಳಿರುವ ಯಾವುದೇ ಲಕ್ಷಣವನ್ನು ತೋರಿಸುತ್ತಿಲ್ಲ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ನರೇಂದ್ರ ಸಲುಜಾ, ಚೆಂಡನ್ನು ಸಲೀಸಾಗಿ ಡ್ರಿಬಲ್ ಮಾಡುತ್ತಾ ಜಂಪ್ ಮಾಡುತ್ತಿರುವುದು ಅನಾರೋಗ್ಯದಿಂದ ಗಾಲಿಕುರ್ಚಿಯಲ್ಲಿ ತಿರುಗಾಡುತ್ತಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಆಗಿರಬಹುದು ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ನಾಯಕಿಯ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. ಅವರು ಚೇತರಿಕೆ ಕಂಡಿದ್ದಾರೆ ಎಂದು ತಿಳಿದಾಗ ಸಂತೋಷವಾಗುತ್ತಿದೆ ಎಂದು ಸಲುಜಾ ಹೇಳಿದರು.



Join Whatsapp