ಬೆಂಗಳೂರು: ಕೇಂದ್ರದ ಆದೇಶ ಪಾಲಿಸಲು ಟ್ವಿಟರ್ ನಿರಾಕರಿಸಿದ್ದು ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವಿನ ವಾಗ್ವಾದ ಮತ್ತೆ ತಾರಕಕ್ಕೇರಿದೆ.
ಇದೀಗ ಕೇಂದ್ರದ ವಿರುದ್ಧ ಟ್ವಿಟರ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಈ ಮೂಲಕ ಟ್ವಿಟರ್ ಕೇಂದ್ರಕ್ಕೆ ಟಕ್ಕರ್ ಕೊಡಲು ಮುಂದಾಗಿದೆ.
ಆಕ್ಷೇಪಾರ್ಹ ಪೋಸ್ಟ್ ಹಾಗೂ ಖಾತೆಗಳನ್ನು ನಿರ್ಬಂಧಿಸಲು ಅತೀ ದೊಡ್ಡ ಸಾಮಾಜಿಕ ಜಾಲತಾಣ ವೇದಿಕೆಯಾಗಿರುವ ಟ್ವಿಟರ್‌ಗೆ ಈಗಾಗಲೇ ಎರಡು ಬಾರಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಎಚ್ಚರಿಕೆ ನೀಡಿದೆ.
ಆದರೆ ಆಕ್ಷೇಪಾರ್ಹ ಪೋಸ್ಟ್ ಹಾಗೂ ಖಾತೆಗಳನ್ನು ನಿರ್ಬಂಧಿಸಲು ಟ್ವಿಟರ್ ಮೀನಾಮೇಶ ಮಾಡುತ್ತಿದ್ದು ಅಂತಿಮ ಗಡುವು ಸನಿಹ ಬಂದಂತೆ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.