ಖಾತೆಗಳ ಅಮಾನತಿಗೆ ಟ್ವಿಟ್ಟರ್ ನಕಾರ| ತ್ರಿಪುರಾ ಪೊಲೀಸರಿಗೆ ಮುಖಭಂಗ!

Prasthutha|

ಅಗರ್ತಲಾ: ಕೋಮು ಗಲಭೆ ಪ್ರಚೋದಿಸುವ ಟ್ವಿಟ್ಟರ್ ಖಾತೆಗಳನ್ನು ಅಮಾನತುಗೊಳಿಸಬೇಕೆಂದು ತ್ರಿಪುರಾ ಪೊಲೀಸರ ಸೂಚನೆಯನ್ನು ಕಡೆಗಣಿಸಿರುವ ಟ್ವಿಟ್ಟರ್ ಪ್ರಾಧಿಕಾರ ಖಾತೆಗಳ ಅಮಾನತಿಗೆ ನಿರಾಕರಿಸಿದ್ದು, ಟ್ವಿಟ್ಟರ್ ನ ಖಡಕ್ ತಿರುಗೇಟಿನಿಂದ ತ್ರಿಪುರಾ ಪೊಲೀಸರು ಭಾರೀ ಮುಖಭಂಗಕ್ಕೊಳಗಾಗಿದ್ದಾರೆ.

- Advertisement -

ಇತ್ತೀಚೆಗೆ ತ್ರಿಪುರಾದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೋಮು ಗಲಭೆಗೆ ಪ್ರಚೋದಿಸುವ ಸುಮಾರು 68 ಟ್ವಿಟ್ಟರ್ ಖಾತೆಗಳನ್ನು ಅಮಾನತುಗೊಳಿಸುವಂತೆ ಟ್ವಿಟ್ಟರ್ ಕಂಪೆನಿಗೆ ತ್ರಿಪುರಾ ಪೊಲೀಸರು ಸೂಚಿಸಿದ್ದು, ಖಾತೆಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಟ್ವಿಟ್ಟರ್ ತಿಳಿಸಿದೆ.

ಟ್ವಿಟ್ಟರ್ ಬಳಕೆದಾರರ ಧ್ವನಿಯನ್ನು ಗೌರವಿಸುವ ಭಾಗವಾಗಿ ಕ್ರಮ ಕೈಗೊಳ್ಳದಿರಲು ಕಂಪೆನಿಯ ನಿರ್ಧಾರವೆಂದು ಟ್ವಿಟ್ಟರ್ ಸ್ಪಷ್ಟಪಡಿಸಿದೆ.

- Advertisement -

ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ ಪೊಲೀಸರು, ಟ್ವಿಟ್ಟರ್, ಫೇಸ್ಬುಕ್, ಯೂಟ್ಯೂಬ್ ಸೇರಿದಂತೆ 102 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಯುಎಪಿಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಳೆದ ತಿಂಗಳು ತ್ರಿಪುರಾದಲ್ಲಿ ಮುಸ್ಲಿಮರ ವಿರುದ್ಧದ ಹಿಂಸಾಚಾರದ ವೇಳೆ ಸಂಘಪರಿವಾರದ ದುಷ್ಕರ್ಮಿಗಳು ಹಲವಾರು ಮಸೀದಿ, ಮನೆ ಮತ್ತು ಅಂಗಡಿಗಳನ್ನು ಸುಟ್ಟು ಹಾಕಿ ಧ್ವಂಸಗೊಳಿಸಲಾಗಿತ್ತು ಎಂದು ನೆಟ್ಟಿಗರು ಆರೋಪಿಸಿದ್ದರು.

ನವೆಂಬರ್ 3 ರಂದು ಭಾರತದ ಟ್ವಿಟ್ಟರ್ ನ ತಾಂತ್ರಿಕ ಅಧಿಕಾರಿ ಜೆರೆಮಿ ಕೆಸೆಲ್ ಅವರಿಗೆ ಬರೆದ ಪತ್ರದಲ್ಲಿ ತ್ರಿಪುರಾ ಪೊಲೀಸರು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಗಳು ಹಿಂದೂ ಮುಸ್ಲಿಮರ ನಡುವೆ ವೈಷಮ್ಯತೆ ಉಂಟು ಮಾಡಲಿದೆ ಎಂಬ ಆರೋಪ ಹೊರಿಸಿ ಖಾತೆಗಳ ಅಮಾನತಿಗೆ ಸೂಚಿಸಿತ್ತು.



Join Whatsapp