ಅಕ್ಷರದ ಮಿತಿಯನ್ನು 4 ಸಾವಿರಕ್ಕೆ ಏರಿಕೆ ಮಾಡಿದ ಟ್ವಿಟ್ಟರ್!

Prasthutha|

ವಾಷಿಂಗ್ಟನ್: “ಟ್ವಿಟ್ಟರ್ ನಲ್ಲಿ ಅಕ್ಷರಗಳ ಮಿತಿಯನ್ನು ಶೀಘ್ರದಲ್ಲೇ 4,000ಕ್ಕೆ ಏರಿಕೆ ಮಾಡಲಾಗುವುದು,’ ಎಂದು ಟ್ವಿಟರ್ ಮಾಲಕ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.

- Advertisement -

ಪ್ರಸ್ತುತ 280 ಇರುವ ಅಕ್ಷರ ಮಿತಿಯನ್ನು 4,000ಕ್ಕೆ ಹೆಚ್ಚಿಸಲು ಟ್ವಿಟ್ಟರ್ ಮುಂದಾಗಿದೆ.

ಎಲಾನ್ ಮಸ್ಕ್ ಅವರ ಈ ನಿರ್ಧಾರಕ್ಕೆ ಪರ-ವಿರೋಧದ ಅಭಿಪ್ರಾಯ ಕೇಳಿಬಂದಿದೆ. “ಅಕ್ಷರಗಳ ಮಿತಿಯನ್ನು 4,000ಕ್ಕೆ ಏರಿಸಿದರೆ ಅದು ಪ್ರಬಂಧವಾಗುವುದೇ ವಿನಃ ಟ್ವೀಟ್ ಆಗುವುದಿಲ್ಲ,’ ಎಂದು ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಮತ್ತೂಂದೆಡೆ ರವಿವಾರದಿಂದ ಜಗತ್ತಿನಾದ್ಯಂತ ಇರುವ ಬಳಕೆದಾರರಿಗೆ “ಕಮ್ಯುನಿಟಿ ನೋಟ್ಸ್’ ಸೌಲಭ್ಯವನ್ನು ಕಂಪೆನಿ ಕಲ್ಪಿಸಿದೆ.

Join Whatsapp