ಹೊಸ ‘ಗ್ರೇ ಮಾರ್ಕ್’ ಸೇವೆ ಆರಂಭಿಸಿದ ಟ್ವಿಟರ್

Prasthutha|

ನವದೆಹಲಿ: ಟ್ವಿಟರ್’ನಲ್ಲಿ ಹೊಸ ‘ಗ್ರೇ ಮಾರ್ಕ್’ ಸೇವೆ ಆರಂಭವಾಗಿದ್ದು, ಸರ್ಕಾರಿ ಅಧಿಕಾರಿಗಳು ಮತ್ತು ಬಹುಪಕ್ಷೀಯ ಸಂಸ್ಥೆಗಳು ಈಗ ತಮ್ಮ ಹೆಸರುಗಳ ಜೊತೆಗೆ ಬೂದು ಬಣ್ಣದ ಟಿಕ್ ಹೊಂದಿರುತ್ತವೆ.

- Advertisement -


ಈ ಬಗ್ಗೆ ಟ್ವಿಟರ್ ಮಾಹಿತಿ ನೀಡಿದ್ದು, ಇಂದಿನಿಂದ, ನೀವು ಟ್ವಿಟರ್’ನಲ್ಲಿ ಖಾತೆಗಳಿಗೆ ಒದಗಿಸುವ ಹೆಚ್ಚುವರಿ ಐಕಾನ್’ಗಳನ್ನು ನೋಡಲು ಪ್ರಾರಂಭಿಸುತ್ತೀರಿ. ನೀಲಿ ಮತ್ತು ಚಿನ್ನದ ಟಿಕ್’ಗಳ ಜೊತೆಗೆ, ನೀವು ಸರ್ಕಾರಿ ಮತ್ತು ಬಹುಪಕ್ಷೀಯ ಖಾತೆಗಳಿಗೆ ಬೂದುಬಣ್ಣದ ಟಿಕ್’ಗಳನ್ನು ಮತ್ತು ಆಯ್ದ ವ್ಯವಹಾರಗಳಿಗೆ ಚೌಕಾಕಾರದ ಅಫಿಲಿಯೇಷನ್ ಬ್ಯಾಡ್ಜ್’ಗಳನ್ನು ನೋಡುತ್ತೀರಿ ಎಂದಿದೆ.


ಹಲವಾರು ಪ್ರೊಫೈಲ್’ಗಳು ಹಳೆಯ ನೀಲಿ ಬಣ್ಣದ ಟಿಕ್’ನೊಂದಿಗೆ ಗೋಚರಿಸುತ್ತಿರುವುದರಿಂದ ಈ ಹೊಸ ಬೆಳವಣಿಗೆಯು ಸಂಪೂರ್ಣವಾಗಿ ಹೊರಬಂದಿಲ್ಲ.

Join Whatsapp