ನಿತ್ಯದ ಪೋಸ್ಟ್ ವೀಕ್ಷಣೆಗೆ ಮಿತಿ ಹೇರಿದ ಟ್ವಿಟರ್: ಏನಿದು ಹೊಸ ಬದಲಾವಣೆ?

Prasthutha|

ವಾಷಿಂಗ್ಟನ್‌: ಆರಂಭದಿಂದಲೂ ಟ್ವಿಟರ್‌ನಲ್ಲಿ ಒಂದಿಲ್ಲೊಂದು ಬದಲಾವಣೆಯನ್ನು ತರುತ್ತಿರುವ ಟ್ವಿಟರ್‌ ಮುಖ್ಯಸ್ಥ ಎಲೋನ್‌ ಮಸ್ಕ್‌, ಇದೀಗ ಒಂದು ದಿನಕ್ಕೆ ಟ್ವಿಟರ್‌ನಲ್ಲಿ ಇಂತ್ತಿಷ್ಟೇ ಪೋಸ್ಟ್‌ಗಳನ್ನ ವೀಕ್ಷಿಸುವ ಮಿತಿ ಏರಿದ್ದಾರೆ.

- Advertisement -

ಶನಿವಾರ ವಿಶ್ವದಾದ್ಯಂತ ಕೆಲಕಾಲ ಟ್ವಿಟರ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಜನ ಅಸಮಾಧಾನ ಹೊರಹಾಕಿದ್ದು, ಬಳಿಕ ಈ ಹಿನ್ನೆಲೆಯಲ್ಲಿ ಮಸ್ಕ್‌ ಬದಲಾವಣೆಯ ಅಸ್ತ್ರ ಹೂಡಿದ್ದಾರೆ.

ಅನಗತ್ಯ ಡೇಟಾ ಬಳಕೆ ಮಾಡೋದನ್ನು ತಪ್ಪಿಸುವುದು, ಕೆಲ ಪೋಸ್ಟ್‌ಗಳ ಮೂಲಕ ಕೆರಳಿಸುವ ಯತ್ನ ಮಾಡುತ್ತಿರುವುದು ಸೇರಿದಂತೆ ಹಲವು ವಿಷಯಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಟ್ವಿಟರ್‌ ಪ್ರತಿದಿನದ ಪೋಸ್ಟ್‌ ವೀಕ್ಷಣೆಗೆ ಮಿತಿ ಹೇರಿದೆ. ಇದು ತಾತ್ಕಾಲಿಕ ಕ್ರಮವಾಗಿದೆ. ಮುಂದೆ ಟ್ವಿಟರ್‌ ಬಳಕೆದಾರರ ಪ್ರತಿಕ್ರಿಯೆ ನೋಡಿಕೊಂಡು ಬದಲಾವಣೆ ತರುವ ಸಾಧ್ಯತೆಗಳಿವೆ.

- Advertisement -

ಟ್ವಿಟರ್‌ನಿಂದ ಪರಿಶೀಲಿಸಿದ ಖಾತೆ (Twitter Verified Accounts) ಹೊಂದಿರುವವರು ನಿತ್ಯ 6,000 ಪೋಸ್ಟ್‌ ಮಾತ್ರ ವೀಕ್ಷಿಸಲು ಅಥವಾ ಓದಲು ಅವಕಾಶವಿದೆ. ಪರಿಶೀಲನೆಯಾಗದ ಖಾತೆದಾರರು ನಿತ್ಯ 600 ಮಾತ್ರ ವೀಕ್ಷಿಸಿ ಓದಲು ಅವಕಾಶವಿದೆ. ಅದೇ ರೀತಿ ಹೊಸದಾಗಿ ಖಾತೆ ಆರಂಭಿಸಿ ಪರಿಶೀಲನೆಯಾಗದ ಖಾತೆದಾರರು 300 ಪೋಸ್ಟ್‌ಗಳ ವೀಕ್ಷಣೆಗೆ ಮಿತಿ ಹೇರಲಾಗಿದೆ.
ಈ ಕುರಿತು ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯಲು ಸ್ವತಃ ಎಲಾನ್‌ ಮಸ್ಕ್‌ ಅವರೇ ಟ್ವೀಟ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Join Whatsapp