ಟ್ವಿಟರ್ ದಿವಾಳಿಯಾಗಬಹುದು; ಎಚ್ಚರಿಕೆ ನೀಡಿದ ಎಲಾನ್ ಮಸ್ಕ್

Prasthutha|

ವಾಷಿಂಗ್ಟನ್: ಸಂಸ್ಥೆಯ ಮೇಲಧಿಕಾರಿಗಳು ಯಾವ ತ್ಯಾಗವನ್ನೂ ಮಾಡದೆ ವೈಯಕ್ತಿಕ ಹಿತಾಸಕ್ತಿಯನ್ನು ನೋಡಿಕೊಳ್ಳುವುದಾದರೆ ಟ್ವಿಟರ್ ದಿವಾಳಿಯಾಗುವ ದಿನ ದೂರವಿಲ್ಲ ಎಂದು ಟ್ವಿಟರ್ ನ ನೂತನ ಮುಖ್ಯಸ್ಥ ಎಲಾನ್ ಮಸ್ಕ್ ಎಚ್ಚರಿಸಿದ್ದಾರೆ.

- Advertisement -

ಅವರು ಸ್ಯಾನ್ ಫ್ರಾನ್ಸಿಸ್ಕೋದ ಮುಖ್ಯ ಕಚೇರಿಯಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಎರಡು ವಾರಗಳ ಹಿಂದೆ 44 ಬಿಲಿಯನ್ ಡಾಲರಿಗೆ ಮಸ್ಕ್ ಅವರು ಟ್ವಿಟರ್ ಖರೀದಿಸಿದ್ದರು. ಹಿರಿಯ ಅಧಿಕಾರಿಗಳು ಸಂಸ್ಥೆಯನ್ನು ಮುಳುಗಿಸುತ್ತಿರುವಾಗ ಟ್ವಿಟರ್ ಅನ್ನು ಎಲಾನ್ ಕೈಗೆ ಮಾರಲಾಗಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

- Advertisement -

ಆದ್ದರಿಂದ ಮಸ್ಕ್ ಅವರು ನೇರವಾಗಿಯೇ ಅಧಿಕಾರಿಗಳಿಗೇ ದಿವಾಳಿ ಸಾಧ್ಯತೆಯ ಎಚ್ಚರಿಕೆ ನೀಡಿದ್ದಾರೆ. ಇಬ್ಬರು ಹಿರಿಯ ಕಾರ್ಯಕಾರಿ ನಿರ್ವಾಹಕರಾದ ಯೋಲ್ ರೋತ್ ಮತ್ತು ರಾಬಿನ್ ವೀಲರ್ ಮಸ್ಕ್ ಜೊತೆಗೆ ಬುಧವಾರ ಟ್ವಿಟರ್ ಮಾತುಕತೆ ನಡೆಸಿ ಜಾಹೀರಾತು ಖಚಿತತೆ ಬಗ್ಗೆ ಆಶ್ವಾಸನೆ ನೀಡಿದ್ದರು. ಆದರೆ ಅವರು ಗುರುವಾರ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮಸ್ಕ್ ದಿವಾಳಿಯ ಮಾತಾಡಿದ್ದಾರೆ.

ಜೊತೆಗೆ ರೋತ್ ಮತ್ತು ರೋಲರ್ ಈ ಬಗ್ಗೆ ವಿವರಣೆ ನೀಡಲು ಯಾರಿಗೂ ಸಿಕ್ಕಿಲ್ಲ. 

ಗುರುವಾರ ಟ್ವೀಟ್ ಮಾಡಿರುವ ಮುಖ್ಯ ಭದ್ರತಾ ಅಧಿಕಾರಿ ಲೀ ಕಿಸ್ನರ್, ನಾನು ರಾಜೀನಾಮೆ ನೀಡಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.

ಮುಖ್ಯ ಖಾಸಗಿತನ ಅಧಿಕಾರಿ ಡೇಮಿಯನ್ ಕೀರೆನ್ ಮತ್ತು ಮುಖ್ಯ ಅನುಸರಣಾ ಅಧಿಕಾರಿ ಮರಿಯಾನ್ನೆ ಫೋಗಾರ್ತಿ ಸಹ ರಾಜೀನಾಮೆ ನೀಡಿದ್ದಾರೆ.

ಟ್ವಿಟರ್ ತೀವ್ರ ಬಿಕ್ಕಟ್ಟಿನಲ್ಲಿರುವುದನ್ನು ಗಮನಿಸುತ್ತಿರುವುದಾಗಿ ಅಮೆರಿಕದ ಎಫ್ ಟಿಸಿ- ಫೆಡರಲ್ ಟ್ರೇಡ್ ಕಮಿಶನ್ ಹೇಳಿದೆ. ಖಾಸಗಿತನ ಮತ್ತು ಅನುಸರಣಾ ವಿಭಾಗದ ರಾಜೀನಾಮೆಗಳು ಮಾರಕ ಎಂದು ಅದು ಹೇಳಿದೆ.

ಗುರುವಾರ ಎಲ್ಲ ನೌಕರರೊಡನೆ ಟ್ವೀಟ್ ಮಾತುಕತೆ ನಡೆಸಿದ ಮಸ್ಕ್ ಅವರು ಸಂಸ್ಥೆಯು ಮುಂದಿನ ವರ್ಷ ನೂರಾರು ಕೋಟಿ ಡಾಲರ್ ನಷ್ಟ ಅನುಭವಿಸಲಿದೆ ಎಂದು ಹೇಳಿದರು.

 ಪ್ರತಿ ದಿನ 4 ಬಿಲಿಯ ಡಾಲರ್ ನಷ್ಟ ಆಗುತ್ತಿದೆ ಎಂದು ಮಸ್ಕ್ ಅವರು ಅಕ್ಟೋಬರ್ 27ರಂದು ಬಂದ ದಿನದಿಂದಲೇ ಮಾಹಿತಿಗೆ ಕೊಕ್ಕೆ ಹಾಕಿದ್ದು, ಇದು ಜಾಹೀರಾತುದಾರರು ದೂರ ಹೋಗುವಂತೆ ಮಾಡಿದೆ.

ಟ್ವಿಟರ್ ಈಗ 13 ಬಿಲಿಯ ಡಾಲರ್ ಸಾಲದ ಸಂಸ್ಥೆಯಾಗಿದ್ದು, ಅದಕ್ಕೆ ಬಡ್ಡಿ ಕಟ್ಟುವ ಹೊರೆಯೂ ಅದರ ಮೇಲಿದೆ. ಮುಂದಿನ 12 ತಿಂಗಳಲ್ಲಿ ಕಟ್ಟಬೇಕಾದ ಬಡ್ಡಿಯೇ 1.2 ಬಿಲಿಯನ್ ಡಾಲರ್ ಆಗಲಿದೆ. ಜೂನ್ ಅಂತ್ಯಕ್ಕೆ ಟ್ವಿಟರ್ ಹಣ ಒಳ ಹರಿವು 1.1 ಬಿಲಿಯ ಡಾಲರ್ ಇತ್ತು.

ಅರ್ಧದಷ್ಟು ನೌಕರರನ್ನು ತೆಗೆದುಹಾಕುವುದಾಗಿ ಮಸ್ಕ್ ಕಳೆದ ವಾರ ಘೋಷಿಸಿದ್ದರು. ನಕಲಿ ಟ್ವಿಟರ್ ಖಾತೆಗಳನ್ನು ಕಿತ್ತು ಹಾಕಲು ಹಾಗೂ ತಿಂಗಳಿಗೆ 8 ಡಾಲರ್ ಪ್ರತಿ ಬಳಕೆದಾರ ಶುಲ್ಕ ತೆರಬೇಕು ಎಂದೂ ಹೇಳಿದ್ದರು.

Join Whatsapp