ಗಾಝಿಯಾಬಾದ್: 25 ನೇ ಮಹಡಿಯಿಂದ ಕೆಳಗೆ ಬಿದ್ದು ಅವಳಿ ಸಹೋದರರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ನಡೆದಿದೆ.
ಮೃತಪಟ್ಟ ಅವಳಿ ಸಹೋದರರನ್ನು 14ವರ್ಷದ ಸತ್ಯನಾರಾಯಣ್ ಮತ್ತು ಸೂರ್ಯನಾರಾಯಣ್ ಎಂದು ಗುರುತಿಸಲಾಗಿದೆ. ಮಕ್ಕಳು 25 ನೇ ಮಹಡಿಯಿಂದ ಹೇಗೆ ಬಿದ್ದರು ಎಂಬುದು ಸ್ಪಷ್ಟವಾಗಿಲ್ಲ.
ಮಕ್ಕಳ ತಂದೆ ಮುಂಬೈನಲ್ಲಿದ್ದು, ಮನೆಯಲ್ಲಿ ತಾಯಿ, ಸಹೋದರಿ ಮತ್ತು ಈ ಎರಡು ಅವಳಿ ಮಕ್ಕಳು ಮಾತ್ರ ಇದ್ದರು. ರಾತ್ರಿ ಒಂದು ಗಂಟೆಯ ಸಮಯದಲ್ಲಿ ಇಬ್ಬರು ಅಪಾರ್ಟ್ಮೆಂಟ್ನಿಂದ ಕೆಳಗೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪ್ರಾಥಮಿಕ ತನಿಖೆಯಲ್ಲಿ “ಆಕಸ್ಮಿಕ ಸಾವು” ಎಂದು ವರದಿಯಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ವಿಜಯನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಹಿಪಾಲ್ ಸಿಂಗ್ ಹೇಳಿದರು.