ಜಿಮ್ ನಲ್ಲಿ ಕುಸಿದು ಬಿದ್ದು ಟಿವಿ ನಟ ಸಿದ್ಧಾಂತ್ ಸೂರ್ಯವಂಶಿ ಸಾವು

Prasthutha|

ಮುಂಬೈ: ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಕುಸಿದುಬಿದ್ದು ಹಿಂದಿ ಕಿರುತೆರೆಯಲ್ಲಿ ನಟ ಸಿದ್ಧಾಂತ್ ಸೂರ್ಯವಂಶಿ ಸಾವನ್ನಪ್ಪಿದ್ದಾರೆ.

- Advertisement -

‘ಕುಸುಮ್’ ಮತ್ತು ‘ಕಸೌತಿ ಜಿಂದಗಿ ಕೇ’ ಎಂಬ ಟೆಲಿವಿಷನ್ ಸರಣಿಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಟಿವಿ ನಟ ಸಿದ್ಧಾಂತ್ ಸೂರ್ಯವಂಶಿ ಅವರು ತಮ್ಮ 46 ನೇ ವಯಸ್ಸಿನಲ್ಲಿ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದು ನಿಧನರಾದರು. ಸಿದ್ಧಾಂತ್ ಸೂರ್ಯವಂಶಿ ಅವರು ಪತ್ನಿ, ಸೂಪರ್ ಮಾಡೆಲ್ ಅಲೆಸಿಯಾ ರಾವತ್ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸೂರ್ಯವಂಶಿ ಅವರು ಕುಸುಮ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ, ತಮ್ಮ ವೃತ್ತಿಜೀವನದುದ್ದಕ್ಕೂ, ಅವರು ಕಸೌತಿ ಜಿಂದಗಿ ಕೇ, ಕೃಷ್ಣ ಅರ್ಜುನ್ ಮತ್ತು ಜಿಡ್ಡಿ ದಿಲ್ ನಂತಹ ಟಿವಿ ಶೋಗಳಲ್ಲಿ ಹಲವಾರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

- Advertisement -

Join Whatsapp