ಟರ್ಕಿ, ಸಿರಿಯಾದಲ್ಲಿ ಭೂಕಂಪನ: ಮೃತರ ಸಂಖ್ಯೆ 8700ಕ್ಕೇರಿಕೆ

Prasthutha|

ಅಂಕಾರ: ದಕ್ಷಿಣ ಟರ್ಕಿಯಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪನಗಳಿಂದ ಸಾವನ್ನಪ್ಪಿದವರ ಸಂಖ್ಯೆ 6,234 ಕ್ಕೆ ಏರಿದೆ ಎಂದು ಭೂಕಂಪದ ನಂತರದ ಪರಿಸ್ಥಿತಿಯನ್ನು ನಿಭಾಯಿಸುವ ಜವಾಬ್ದಾರಿ ಹೊತ್ತಿರುವ ಟರ್ಕಿಯ ವಿಪತ್ತು ಸಂಸ್ಥೆ ಎಎಫ್’ಎಡಿ ತಿಳಿಸಿದೆ.

- Advertisement -


ಗಾಯಗೊಂಡವರ ಸಂಖ್ಯೆ 37,011 ಕ್ಕೆ ಏರಿದೆ, 79,000 ಕ್ಕೂ ಹೆಚ್ಚು ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದ ವಾಯವ್ಯ ಭಾಗಗಳಲ್ಲಿ ಸಾವಿನ ಸಂಖ್ಯೆ ಕನಿಷ್ಠ 1,280 ಕ್ಕೆ ಏರಿದೆ ಮತ್ತು 2,600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವೈಟ್ ಹೆಲ್ಮೆಟ್ಸ್ ಎಂಬ ಸಿರಿಯನ್ ಸಿವಿಲ್ ಡಿಫೆನ್ಸ್ ಗುಂಪು ತಿಳಿಸಿದೆ.


ಅಸ್ಸಾದ್ ಆಡಳಿತದ ನಿಯಂತ್ರಿತ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ ಸುಮಾರು 1,220 ಎಂದು ವರದಿಯಾಗಿದೆ. ಇದುವರೆಗೆ ಒಟ್ಟು ಸಾವಿನ ಸಂಖ್ಯೆ 8,734 ರಷ್ಟಿದೆ.

- Advertisement -



Join Whatsapp