ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು ನಂದಿಸುತ್ತಿದ್ದಾಗ ವಿಮಾನ ಪತನ: ಪವಾಡಸದೃಶ ರೀತಿಯಲ್ಲಿ ಪಾರಾದ ಪೈಲಟ್’ಗಳು

Prasthutha|

ಸಿಡ್ನಿ: ಆಸ್ಟ್ರೇಲಿಯಾದ ದೂರದ ಪಶ್ಚಿಮ ಭಾಗದಲ್ಲಿ ಕಾಳ್ಗಿಚ್ಚು ನಂದಿಸುತ್ತಿದ್ದ ನೀರಿನ ಫಿರಂಗಿಯ ಬೋಯಿಂಗ್ 737 ವಿಮಾನವು ಅಪಘಾತಕ್ಕೆ ಒಳಗಾದರೂ ಅದರ ಇಬ್ಬರು ಪೈಲಟ್’ಗಳು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

- Advertisement -


ಪರ್ತ್’ನಿಂದ 420 ಕಿಲೋಮೀಟರ್ ದೂರದ ಫಿಟ್ಜ್ ಜೆರಾಲ್ಡ್ ರಾಷ್ಟ್ರೀಯ ಉದ್ಯಾನದಲ್ಲಿ ಕಾಳ್ಗಿಚ್ಚನ್ನು ನಂದಿಸಲು ವಿಮಾನ, ನೀರು ಹಾರಿಸುತ್ತಿದ್ದಾಗ ಮರಗಳ ನಡುವೆ ಬೋಯಿಂಗ್ ಧರೆಗುರುಳಿದೆ.
ಸೋಮವಾರ ದೂರದಿಂದ ಇದರ ಅಂತ್ಯವನ್ನು ಸೆರೆ ಹಿಡಿಯಲಾಗಿದ್ದು ವಿಮಾನದಿಂದ ದಟ್ಟ ಹೊಗೆಯು ಹೊಮ್ಮುತ್ತಿತ್ತು, ಹಿಂದಿನ ಇಂಧನ ಭಾಗಕ್ಕೆ ಬೆಂಕಿ ಹೊತ್ತಿಕೊಂಡಿತು. ಅದರ ಪರಿಣಾಮವಾಗಿ ಸುತ್ತಣ ಹಸಿರೆಲ್ಲ ಕರಕಲಾಗಿ ಹೋಗಿದೆ.


ತುರ್ತು ಸೇವಾ ದಳದವರು ಹಿಡಿದ ಚಿತ್ರ ಗಮನಿಸಿದಾಗ, ವಿಮಾನದ ಬಾಲದ ಭಾಗವು ವಿಮಾನದ ಉಳಿದ ಭಾಗದಿಂದ ಬೇರೆಯಾಗಿತ್ತು.
ಇಬ್ಬರು ಪೈಲಟ್’ಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರು ಯಾರೆಂದು ತಿಳಿದು ಬಂದಿಲ್ಲ; ಬಹುಶಃ ಉತ್ತರ ಅಮೆರಿಕದವರು ಎಂದು ಶಂಕಿಸಲಾಗಿದೆ.

- Advertisement -


“ಅವರಿಬ್ಬರೂ ಉರಿಯುವ ವಿಮಾನದಿಂದ ಹೊರಬಂದುದು ಪವಾಡಕ್ಕಿಂತ ಕಡಿಮೆಯೇನಲ್ಲ” ಎಂದು ತುರ್ತು ಸೇವೆಗಳ ಮಂತ್ರಿ ಸ್ಟೀಫನ್ ಡಾವ್ಸನ್ ಹೇಳಿದರು.
“ಅವರಿಬ್ಬರೂ ತುಸು ಗಾಯಗೊಂಡಿದ್ದರೂ ಆರೋಗ್ಯವಾಗಿರುವುದು ಉಲ್ಲೇಖನೀಯ. ಇದನ್ನು ಅವರ ಪೈಲೆಟ್ ಕೌಶಲ್ಯಕ್ಕೆ ಪರೀಕ್ಷೆ ಎಂದು ಕೂಡ ತಿಳಿಯಬಹುದು” ಎಂದೂ ಡಾವ್ಸನ್ ಹೇಳಿದರು.
ಆಸ್ಟ್ರೇಲಿಯಾದ ಸಾರಿಗೆ ಸುರಕ್ಷತಾ ಬ್ಯೂರೋ ತನಿಖೆ ಆರಂಭಿಸಿದ್ದು, ಈ ದೇಶದ ಬೆಟ್ಟ ಕಾಡು ಸಾಲಿನಲ್ಲಿ ಬೋಯಿಂಗ್ 737 ಪತನ ಇದೇ ಮೊದಲು ಎಂದು ತಿಳಿಸಿದರು.


“ಇದು ಅದ್ಭುತ ವಿಮಾನದಲ್ಲಿದ್ದ ಇಬ್ಬರೂ ಪೈಲೆಟ್’ಗಳು ಅವರಾಗಿಯೇ ಆರೋಗ್ಯಪೂರ್ಣವಾಗಿ ಅಪಾಯ ದಾಟಿ ಹೊರಕ್ಕೆ ಬಂದಿದ್ದಾರೆ ಎಂದು ಬ್ಯೂರೋದ ಮುಖ್ಯ ಆಯುಕ್ತ ಆಂಗಸ್ ಮಿಚೆಲ್ ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ 64 ಬೆಂಕಿ ನಂದಿಸುವ ವಿಮಾನಗಳು ಪತನಗೊಂಡಿವೆ’ ಅವೆಲ್ಲವುಗಳಿಂದ ಪಾಠ ಕಲಿಯುತ್ತಲೇ ಇದ್ದೇವೆ.
ತನಿಖೆಯ ಫಲಿತದಿಂದ ಮುಂದೆ ಪೈಲೆಟ್ ಗಳು ಇನ್ನಷ್ಟು ಸುರಕ್ಷಿತವಾಗಿರುವ ಸೂತ್ರ ಸಾಧ್ಯ ಎಂಬುದು ಅವರ ಆಶಯ.

Join Whatsapp