“ಸುಳ್ಳಿನ ಮೇಲೆ ಸುಳ್ಳು…!” | ಟ್ರಂಪ್ ಭಾಷಣ ಪ್ರಸಾರ ಅರ್ಧಕ್ಕೆ ನಿಲ್ಲಿಸಿದ ಅಮೆರಿಕ ಚಾನೆಲ್ ಗಳು!

Prasthutha: November 6, 2020

ವಾಷಿಂಗ್ಟನ್ : ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲಿನ ಅಂಚಿನಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ತಡರಾತ್ರಿ ಶ್ವೇತಭವನದಿಂದ ಮಾಡಿದ ಭಾಷಣವನ್ನು ಅಲ್ಲಿನ ಹಲವು ಸುದ್ದಿ ವಾಹಿನಿಗಳು ತಡೆಹಿಡಿದ ಘಟನೆ ನಡೆದಿದೆ. ಟ್ರಂಪ್ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳುತ್ತಿದ್ದಾರೆಂದು ಆಪಾದಿಸಿ, ಬಹುತೇಕ ಸುದ್ದಿ ವಾಹಿನಿಗಳು ಅವರ ಭಾಷಣವನ್ನು ಅರ್ಧದಲ್ಲೇ ಪ್ರಸಾರ ನಿಲ್ಲಿಸಿದ ಬಗ್ಗೆ ವರದಿಯಾಗಿದೆ.

ಅಮೆರಿಕದ ಪ್ರಮುಖ ಸುದ್ದಿವಾಹಿನಿಗಳಾದ ಎಬಿಸಿ, ಸಿಬಿಸಿ ಮತ್ತು ಎನ್ ಬಿಸಿ ಸೇರಿದಂತೆ ಬಹುತೇಕ ಎಲ್ಲಾ ಸುದ್ದಿವಾಹಿನಿಗಳು ಅಧ್ಯಕ್ಷರ ಭಾಷಣದ ಪ್ರಸಾರವನ್ನು ಅರ್ಧಕ್ಕೆ ಮೊಟಕುಗೊಳಿಸಿದವು. ಚುನಾವಣೆಯನ್ನು ಕಸಿಯಲು ಯತ್ನಿಸಲಾಗಿದೆ ಎಂಬ ಸಾಕ್ಷ್ಯವಿಲ್ಲದ ಮಾತುಗಳನ್ನಾಡಿದ ಟ್ರಂಪ್ ಭಾಷಣಕ್ಕೆ ಮಾಧ್ಯಮಗಳು ಆಕ್ರೋಶ ವ್ಯಕ್ತಪಡಿಸಿ, ಈ ನಿರ್ಧಾರ ಕೈಗೊಂಡವು.  

ಟ್ರಂಪ್ ತಮ್ಮ 17 ನಿಮಿಷಗಳ ಭಾಷಣದಲ್ಲಿ ಡೆಮಾಕ್ರಟಿಕ್ ಪಕ್ಷದವರು ಚುನಾವಣೆ ಗೆಲ್ಲಲು ಅಕ್ರಮ ಮತದಾನ ಮಾಡಿದ್ದಾರೆ ಎಂದು ಆಪಾದಿಸಿದ್ದರು.

ಅಮೆರಿಕಕ್ಕೆ ಎಂತಹ ದುರ್ಗತಿಯ ರಾತ್ರಿ ಬಂತೆಂದರೆ, ಚುನಾವಣೆಯನ್ನು ಕಸಿದುಕೊಳ್ಳಲು ಜನರು ಯತ್ನಿಸಿದರು ಎಂದು ಅಮೆರಿಕದ ಅಧ್ಯಕ್ಷರೊಬ್ಬರು ಹೇಳುವುದನ್ನು ಕೇಳುವಂತಾಯಿತು. ಚುನಾವಣೆ ಕಸಿದುಕೊಂಡ ಬಗ್ಗೆ ಸುಳ್ಳಿನ ಮೇಲೆ ಸುಳ್ಳು ಎಂದು ‘ಸಿಎಎನ್’ ಸುದ್ದಿವಾಹಿನಿಯ ಜೇಕ್ ಟೆಪ್ಪರ್ ಹೇಳಿದ್ದಾರೆ.

ಅಮೆರಿಕದ ಮಾಧ್ಯಮಗಳ ನಡೆಯನ್ನು ಮೆಚ್ಚಲೇ ಬೇಕಾದುದು. ಸುಳ್ಳು ಆರೋಪಗಳಿಂದ ಕೂಡಿದ ದೇಶದ ಅಧ್ಯಕ್ಷರೊಬ್ಬರ ಭಾಷಣದ ಪ್ರಸಾರವನ್ನು ಅರ್ಧಕ್ಕೆ ತಡೆಹಿಡಿದು ಪ್ರತಿರೋಧ ವ್ಯಕ್ತಪಡಿಸಿರುವ ಮಾಧ್ಯಮಗಳು, ಭಾರತದ ಮಾಧ್ಯಮಗಳಿಗೆ ಪ್ರೇರಣೆಯಾಗಬಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.        

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ