2007ರಲ್ಲಿ ಬಗ್ದಾದ್ ನಲ್ಲಿ ನಡೆದ ಇರಾಕ್ ನಾಗರಿಕರ ಹತ್ಯೆಯಲ್ಲಿ ದೋಷಿಗಳಾದ ಅಮೆರಿಕಾದ ನಾಲ್ವರು ಮಾಜಿ ಭದ್ರತಾ ಗುತ್ತಿಗೆದಾರರಿಗೆ ಕ್ಷಮಾದಾನ ನೀಡಿದ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಕ್ರಮದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಕಳವಳ ವ್ಯಕ್ತಪಡಿಸಿದೆ.
“14 ಇರಾಕ್ ನಾಗರಿಕರ ಹತ್ಯೆಯ ಅಪರಾಧ ಸಾಬೀತಾದ ಖಾಸಗಿ ಸೇನಾ ಸಂಸ್ಥೆ ಬ್ಲ್ಯಾಕ್ ವಾಟರ್ ನ ನಾಲ್ವರು ಭದ್ರತಾ ಸಿಬ್ಬಂದಿಗಳಿಗೆ ಅಮೆರಿಕಾ ಅಧ್ಯಕ್ಷೀಯ ಕ್ಷಮಾದಾನವನ್ನು ಮಾಡಿರುವ ಕುರಿತು ನಾವು ತೀವ್ರವಾಗಿ ಕಳವಳಗೊಂಡಿದ್ದೇವೆ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಕ್ತಾರ ಮರ್ಟ ಹುರ್ಟದೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಈ ವ್ಯಕ್ತಿಗಳಿಗೆ ಪ್ರಥಮ ದರ್ಜೆ ಹತ್ಯೆಯ ಆರೋಪದಲ್ಲಿ 12 ವರ್ಷಗಳಿಂದ ಹಿಡಿದು ಜೀವಾವಧಿಯವರೆಗೆ ಶಿಕ್ಷೆಯನ್ನು ವಿಧಿಸಲಾಗಿತ್ತು. ಕ್ಷಮಾದಾನವು ನಿರ್ಭಯತೆಯನ್ನು ಉಂಟುಮಾಡುತ್ತದೆ ಮತ್ತು ಭವಿಷ್ಯದಲ್ಲಿ ಇಂಥಹ ಅಪರಾಧಗಳನ್ನು ಮಾಡಲು ಇತರರನ್ನು ಪ್ರೋತ್ಸಾಹಿಸಲಿದೆ” ಎಂದು ಅವರು ಹೇಳಿದರು.