ಬೋಸ್ನಿಯಾ: ಕೊರೆಯುವ ಚಳಿಗೆ ಸೂರಿಲ್ಲದ ನಿರಾಶ್ರಿತರು

Prasthutha|

ಸುಮಾರು 1200 ಮಂದಿಗೆ ಆಶ್ರಯವೊದಗಿಸಿದ್ದ ಲಿಪಾ ಹೌಸಿಂಗ್ ನಲ್ಲಿದ್ದ ನಿರಾಶ್ರಿತ ಶಿಬಿರವು ಬುಧವಾರದಂದು ಅಗ್ನಿಗಾಹುತಿಯಾಗಿತ್ತು.

ಬೆಂಕಿಗಾಹುತಿಯಾದ ಶಿಬಿರದ ಪಕ್ಕದ ಹಾನಿಗೊಂಡ ಲೋಹದ ಕಂಟೈನರ್ ಒಂದರಲ್ಲಿ ಹಲವರು ರಾತ್ರಿಯನ್ನು ಕಳೆದಿದ್ದರು. ಇತರರು ನೈಲೋನ್ ಟೆಂಟ್ ಹಾಕಿ ಕೊರೆಯುವ ಚಳಿಯಲ್ಲಿ ತಣ್ಣನೆ ನೆಲದ ಮೇಲೆ ಮಲಗಿದರು.

- Advertisement -

ಏಶ್ಯಾ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಸುಮಾರು 10000 ನಿರಾಶ್ರಿತರು ಮತ್ತು ವಲಸಿಗರು ಬೋಸ್ನಿಯಾದಲ್ಲಿ ಸಿಲುಕಿಕೊಂಡಿದ್ದಾರೆ.

ಬಿಹಕ್ ನಿಂದ 25 ಕಿಲೊ ಮೀಟರ್ ದೂರದಲ್ಲಿ ತಾತ್ಕಾಲಿಕ ವಾಗಿ ಕಳೆದ ಚಳಿಗಾಳದಲ್ಲಿ ತೆರೆಯಲಾದ ಲಿಪಾ ಶಿಬಿರವನ್ನು ಚಳಿಗಾಲದ ನವೀಕರಣದ ಉದ್ದೇಶದಿಂದ ಬುಧವಾರದಂದು ಮುಚ್ಚಲಾಗಿತ್ತು. ಆದರೆ ಇದರ ನಿವಾಸಿಗಳಿಗೆ ಪರ್ಯಾಯ ನಿವೇಶನಗಳನ್ನು ಒದಗಿಸಲು ಬೋಸ್ನಿಯಾ ಅಧಿಕಾರಿಗಳು ವಿಫಲರಾಗಿದ್ದಾರೆ.

ಅಕ್ಟೋಬರ್ ನಲ್ಲಿ ಮುಚ್ಚುಗಡೆಯಾಗಿರುವ ಬಿಹಕ್ ನಲ್ಲಿರುವ ಬಿರಾ ಶಿಬಿರಕ್ಕೆ ನಿರಾಶ್ರಿತರು ಮತ್ತು ವಲಸಿಗರು ಹಿಂದಿರುಗಬೇಕೆಂದು ಕೇಂದ್ರ ಸರಕಾರ ಬಯಸಿತ್ತು. ಆದರೆ ಸ್ಥಳೀಯ ಅಧಿಕಾರಿಗಳು ಅದನ್ನು ಒಪ್ಪಿರಲಿಲ್ಲ. ಬೋಸ್ನಿಯಾದ ಇತರ ಪ್ರದೇಶಗಳೂ ವಲಸಿಗರ ಬಿಕ್ಕಟ್ಟಿನ ಭಾರವನ್ನು ಹಂಚಿಕೊಳ್ಳಬೇಕಾಗುತ್ತದೆಯೆಂದು ಅಧಿಕಾರಿಗಳು ಹೇಳಿದ್ದರು.

ನಿರಾಶ್ರಿತ ಶಿಬಿರ ಬಿಕ್ಕಟ್ಟನ್ನು ನಿಭಾಯಿಸುವುದಕ್ಕಾಗಿ 60 ದಶಲಕ್ಷ ಯೂರೊ ಗಳನ್ನು ಬೋಸ್ನಿಯಾಗೆ ನೀಡಿ ಬೆಂಬಲಿಸಿದ ಯುರೋಪಿಯನ್ ಯೂನಿಯನ್ ಸೂಕ್ತವಲ್ಲದ ಲಿಪಾ ಶಿಬಿರಕ್ಕೆ ಬದಲಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡುವಂತೆ ಅಧಿಕಾರಿಗಳನ್ನು ಕೇಳಿಕೊಂಡಿತ್ತು.

- Advertisement -