ಮುಂಬೈ: ಟಿಆರ್‌ಪಿ ಹಗರಣದ ಸಂಬಂಧ ಪ್ರಸಾರ ವೀಕ್ಷಕ ಸಂಶೋಧನಾ ಮಂಡಳಿಯ (ಬಿಎಆರ್‌ಸಿ-ಬಾರ್ಕ್) ಮಾಜಿ ಮುಖ್ಯ ನಿರ್ವಹಣಾಧಿಕಾರಿ ರೊಮಿಲ್ ರಾಮ್ ಗರ‍್ಹಿಯಾ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಹಗರಣದ ಸಂಬಂಧ ಬಂಧಿಸಲಾದ 14ನೇ ಆರೋಪಿಯಾಗಿ ರೋಮಿಲ್ ಗುರುತಿಸಲ್ಪಟ್ಟಿದ್ದಾರೆ.
ಹಗರಣದಲ್ಲಿ ಇವರ ಪಾತ್ರವೂ ಇರುವುದು ತನಿಖೆಯಿಂದ ತಿಳಿದುಬಂದಿತ್ತು. ಹೀಗಾಗಿ, ಅವರನ್ನು ಬಂಧಿಸಲಾಗಿದೆ. ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್‌ನ ಸಿಇಒ ವಿಕಾಸ್ ಅವರನ್ನು ಬಂಧಿಸಿದ್ದು, ಬುಧವಾರ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.