ಪಿಸಿಬಿಯ ಮಾನಸಿಕ ಕಿರುಕುಳಕ್ಕೆ ನೊಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಪಾಕ್ ಆಟಗಾರ ಮೊಹಮ್ಮದ್ ಅಮೀರ್

Prasthutha|

ಲಾಹೋರ್ : ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಅಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಹಾಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಜೊತೆ ಕೆಲಸ ಮಾಡುವುದು ಮಾನಸಿಕ ಹಿಂಸೆಯಾಗಿದೆ ಎಂದು ಗಂಭೀರ ಆರೋಪ ಅವರು ಮಾಡಿದ್ದಾರೆ.

- Advertisement -

ಅಂತಾರಾಷ್ಟ್ರೀಯ ಕ್ರಿಕೆಟಿಗೆ ತಾವು ವಿದಾಯ ಹೇಳಲು ಪಿಸಿಬಿಯೇ ಕಾರಣ ಎಂದು ವೇಗದ ಬೌಲರ್ ಮೊಹಮ್ಮದ್ ಅಮೀರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಪ್ರಾಮಾಣಿಕವಾಗಿ ಹೇಳುವುದಾದರೆ, ಈ ಆಡಳಿತ ಮಂಡಳಿಯಡಿ ನನಗೆ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎಂದು ನನಗನಿಸುತ್ತಿದೆ. ನಾನು ಈಗ ಕ್ರಿಕೆಟ್ ಬಿಡುತ್ತಿದ್ದೇನೆ. ನನಗೆ ಮಾನಸಿಕ ಕಿರುಕುಳ ನೀಡಲಾಗಿದೆ. ನನಗೆ ಅದನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. 2010-15ರ ವರೆಗೆ ಸಾಕಷ್ಟು ನೋಡಿದ್ದೇನೆ. ಪಿಸಿಬಿ ನನ್ನ ಮೇಲೆ ತುಂಬಾ ಹೂಡಿಕೆ ಮಾಡಿದೆ ಎಂದು ಪಿಸಿಬಿಯಿಂದ ಪದೇಪದೇ ಕೇಳುತ್ತಿದ್ದೇನೆ. ನಿಷೇಧದ ಬಳಿಕ ಹಿಂದಿರುಗಿದ ನನಗೆ ಅವಕಾಶ ಕೊಟ್ಟ ಶಹೀದ್ ಆಫ್ರಿದಿಗೆ ಕೃತಜ್ಞನಾಗಿದ್ದೇನೆ ಎಂದು ಅಮೀರ್ ಮಾತನಾಡಿರುವ ವೀಡಿಯೊವೊಂದು ವೈರಲ್ ಆಗಿದೆ.

Join Whatsapp