ಪೌರತ್ವ ಕಾಯ್ದೆ ಅಡಿಯಲ್ಲಿ ವಲಸಿಗ ಹಿಂದೂಗಳಿಗೆ ಪೌರತ್ವ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ: ಪಟಾಲ್ ಕನ್ಯಾ

Prasthutha|

ಹೊಸದಿಲ್ಲಿ: ಪೌರತ್ವ ಕಾಯ್ದೆ ಅಡಿಯಲ್ಲಿ ತ್ರಿಪುರಾದಲ್ಲಿರುವ ಬಾಂಗ್ಲಾದೇಶಿ ವಲಸಿಗ ಹಿಂದೂಗಳಿಗೆ ಪೌರತ್ವ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ. ತ್ರಿಪುರಾದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಬಾಂಗ್ಲಾದೇಶದ ಅಕ್ರಮ ವಲಸಿಗರು ನೇರ ಕಾರಣವಾಗಿದ್ದಾರೆ ಎಂದು ತ್ರಿಪುರಾ ಪೀಪಲ್ಸ್ ಫ್ರಂಟ್ (ಟಿಪಿಎಫ್) ಅಧ್ಯಕ್ಷೆ ಪಟಾಲ್ ಕನ್ಯಾ ಜಮಾಟಿಯಾ ಹೇಳಿದ್ದಾರೆ.

- Advertisement -

ತ್ರಿಪುರಾದಲ್ಲಿ ಹಿಂದೂ-ಮುಸ್ಲಿಮರ ನಡುವೆ ಯಾವುದೇ ಘರ್ಷಣೆ ನಡೆದಿಲ್ಲ. ರಾಜ್ಯದಲ್ಲಿ ಅನಧಿಕೃತವಾಗಿ ವಾಸವಿರುವ ಬಾಂಗ್ಲಾದೇಶಿಯರನ್ನು ಹೊರಹಾಕಬೇಕಿದೆ. ಇವರಲ್ಲಿ ಹಿಂದೂ-ಮುಸ್ಲಿಂ ಎಂಬ ವ್ಯತ್ಯಾಸವೇ ಬರುವುದಿಲ್ಲ. ರಾಜ್ಯದ ನಿಜವಾದ ಸಮಸ್ಯೆಯ ಮೂಲ ಅಕ್ರಮ ವಲಸಿಗರಾಗಿದ್ದಾರೆ ಎಂದು ಕನ್ಯಾ ಜಮಾಟಿಯಾ ಹೇಳಿದ್ದಾರೆ.

ತ್ರಿಪುರಾದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಲು, ಅಸ್ಸಾಂ ರಾಜ್ಯದ ರೀತಿಯಲ್ಲಿ NRC ಅನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ದೆಹಲಿಯ ಜಂತರ್ ಮಂತರ್’ನಲ್ಲಿ ತ್ರಿಪುರಾ ಪೀಪಲ್ಸ್ ಫ್ರಂಟ್ ಪಕ್ಷವು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಜಮಾಟಿಯಾ, ತ್ರಿಪುರಾದಲ್ಲಿ ಬಾಂಗ್ಲಾದೇಶಿಯರ ಸರ್ಕಾರ ಆಡಳಿತ ನಡೆಸುತ್ತಿದೆ ಮುಖ್ಯಮಂತ್ರಿ ಹಾಗೂ ಕೆಲ ಸಚಿವರು ಬಾಂಗ್ಲಾದೇಶಿಯರೇ ಆಗಿದ್ದಾರೆ. ತ್ರಿಪುರಾದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇಲ್ಲಿನ ಬಿಜೆಪಿ ಸರಕಾರವನ್ನು ಉಚ್ಛಾಟನೆ ಮಾಡಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

Join Whatsapp