ಯುಎಪಿಎ ಅಡಿ ಝಾಕೀರ್ ನಾಯ್ಕ್ ಸಂಸ್ಥೆ ಕಾನೂನುಬಾಹಿರವೇ ಅಲ್ಲವೇ ಎಂಬುದನ್ನು ನಿರ್ಧರಿಸಲಿರುವ ನ್ಯಾಯಮಂಡಳಿ

Prasthutha|

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಅವರ ಸಂಸ್ಥೆ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಅನ್ನು ಕೇಂದ್ರ ಸರ್ಕಾರವು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿರುವುದನ್ನು ದೃಢೀಕರಿಸುವ ಸಲುವಾಗಿ ದೆಹಲಿ ಹೈಕೋರ್ಟ್ ನ್ಯಾ. ಡಿ ಎನ್ ಪಟೇಲ್ ನೇತೃತ್ವದ ಏಕಸದಸ್ಯ ನ್ಯಾಯಮಂಡಳಿ ರಚಿಸಿದೆ.

- Advertisement -

ಯುಎಪಿಎಯ ಸೆಕ್ಷನ್ 5ರ ಅಡಿಯಲ್ಲಿ ನೀಡಲಾದ ನ್ಯಾಯಮಂಡಳಿ ರಚಿಸುವ ಅಧಿಕಾರವನ್ನು ಚಲಾಯಿಸಿ ಡಿಸೆಂಬರ್ 13 ರಂದು ಗೃಹ ಸಚಿವಾಲಯ ನ್ಯಾಯಮಂಡಳಿ ರಚಿಸಿ ಅಧಿಸೂಚನೆಯನ್ನು ಪ್ರಕಟಿಸಿದೆ. ಕೇಂದ್ರ ಸರ್ಕಾರ ನವೆಂಬರ್ 15, 2021ರಂದು ಅಧಿಸೂಚನೆ ಹೊರಡಿಸಿ ಯುಎಪಿಎ ಅಡಿ ಐ.ಆರ್.ಎಫ್ ಸಂಸ್ಥೆಯನ್ನು ಕಾನೂನುಬಾಹಿರ ಸಂಘ ಎಂದು ಘೋಷಿಸಿತ್ತು.

ಕಾಯಿದೆಯ ಸೆಕ್ಷನ್ 4ರ ಪ್ರಕಾರ ಸರ್ಕಾರದ ಈ ನಿರ್ಧಾರವನ್ನು ನ್ಯಾಯಮಂಡಳಿ ದೃಢೀಕರಿಸಬೇಕಿದ್ದು ನ್ಯಾಯಮಂಡಳಿ ಸಂಬಂಧಪಟ್ಟ ಸಂಘದ ಯಾವುದೇ ಪದಾಧಿಕಾರಿ ಅಥವಾ ಸದಸ್ಯರಿಂದ ಲಿಖಿತ ವಿವರಣೆ ಪಡೆದು ಆ ಬಳಿಕ ನಿರ್ಧಾರ ಕೈಗೊಳ್ಳುತ್ತದೆ. ಕಾಯಿದೆಯ ಸೆಕ್ಷನ್ 5 ಅಂತಹ ನ್ಯಾಯಮಂಡಳಿ ರಚನೆಗೆ ಅವಕಾಶ ಕಲ್ಪಿಸಲಿದ್ದು ಅದರಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

- Advertisement -

ಐ.ಆರ್.ಎಫ್ ಕಾನೂನುಬಾಹಿರ ಸಂಘಟನೆಎಂದು ಘೋಷಿಸಲು ಸಾಕಷ್ಟು ಕಾರಣವಿದೆಯೇ ಎಂದು ನ್ಯಾಯಮಂಡಳಿ ನಿರ್ಧರಿಸಲಿದೆ. ದೆಹಲಿ ಹೈಕೋರ್ಟ್ ಮೇ 2017 ರಲ್ಲಿ ಐ.ಆರ್.ಎಫ್ ಮೇಲೆ ವಿಧಿಸಿದ್ದ ನಿಷೇಧ ರದ್ದುಪಡಿಸಲು ನಿರಾಕರಿಸಿತ್ತು.

Join Whatsapp