ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧ ಫೆಬ್ರವರಿ 28 ರವರೆಗೆ ವಿಸ್ತರಿಸಿದ ಭಾರತ

Prasthutha|

ನವದೆಹಲಿ: ಫೆಬ್ರವರಿ 28 ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟದ ಮೇಲಿನ ನಿರ್ಬಂಧವನ್ನು ವಿಸ್ತರಿಸಿರುವುದಾಗಿ ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ತಿಳಿಸಿದ್ದಾರೆ.

- Advertisement -

ಭಾರತದಿಂದ ನಿರ್ಗಮಿಸುವ ಮತ್ತು ಆಗಮಿಸುವ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ಸೇವೆಗಳ ವಿಮಾನಗಳ ಸೇವೆಯಲ್ಲಿನ ನಿರ್ಬಂಧವನ್ನು ಫೆಬ್ರವರಿ 28, 2022 ರವರೆಗೆ ವಿಸ್ತರಿಸಲು ಪ್ರಾಧಿಕಾರ ನಿರ್ಧರಿಸಿದೆ ಎಂದು ಅಧಿಕೃತವಾಗಿ ತಿಳಿಸಿದೆ.

ಸರಕು ಸೇವಾ ವಿಮಾನಗಳಿಗೆ ಪ್ರಾಧಿಕಾರದ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಅದು ತಿಳಿಸಿದೆ.



Join Whatsapp