ಏಲಕ್ಕಿ ಬೆಳೆ ಗುಣಮಟ್ಟ ಸುಧಾರಣೆ ಬಗ್ಗೆ ತರಬೇತಿ ಕಾರ್ಯಾಗಾರ

Prasthutha|

ಮಡಿಕೇರಿ: ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರ ಮತ್ತು ಸಾಂಬಾರ ಮಂಡಳಿ ಸಹಭಾಗಿತ್ವದಲ್ಲಿ ಏಲಕ್ಕಿ ಬೆಳಗಾರರಿಗೆ ಏಲಕ್ಕಿ ಬೆಳೆಯ ಗುಣಮಟ್ಟ ಸುಧಾರಣೆ ಬಗ್ಗೆ ಒಂದು ದಿನದ ರೈತರ ತರಬೇತಿ ಕಾರ್ಯಕ್ರಮವು ಅಪ್ಪಂಗಳದ ಐಐಎಸ್ಆಸರ್ ಪ್ರಾದೇಶಿಕ ಕೇಂದ್ರದಲ್ಲಿ ನಡೆಯಿತು.

- Advertisement -


ಪ್ರಗತಿಪರ ರೈತರಾದ ಎ.ಆರ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಏಲಕ್ಕಿ ಬೆಳೆಗಾರರನ್ನು ಉದ್ದೇಶಿಸಿ ಈಗಿನ ತಂತ್ರಜ್ಞಾನ ಮತ್ತು ವಿವಿಧ ಅಭಿವೃದ್ಧಿ ಪಡಿಸಿದ ತಳಿಗಳನ್ನು ಏಲಕ್ಕಿ ಬೆಳೆಯಲ್ಲಿ ಅಳವಡಿಸಿಕೊಳ್ಳಬೇಕು. ಹಾಗೆಯೇ ವಿವಿಧ ಮಿಶ್ರಬೆಳೆಗಳನ್ನು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಡಿಕೇರಿ ಸಂಬಾರ ಮಂಡಳಿ ಸಹಾಯಕ ನಿರ್ದೇಶಕರಾದ ಬಿಜು.ಎಸ್.ಎಸ್ ಅವರು ಸಂಬಾರ ಮಂಡಳಿಯಿಂದ ದೊರೆಯುವ ಅನುಕೂಲಗಳ ಬಗ್ಗೆ ತಿಳಿಸಿಕೊಟ್ಟರು. ತರಬೇತಿ ಕಾರ್ಯಕ್ರಮದಲ್ಲಿ ಏಲಕ್ಕಿ ಆಧುನಿಕ ಉತ್ಪಾದನೆ ಬಗ್ಗೆ ಒತ್ತು ನೀಡಲಾಯಿತು. ಏಲಕ್ಕಿ ಬೆಳೆಯಲ್ಲಿ ವೈಜ್ಞಾನಿಕ ಕೃಷಿ ಮತ್ತು ಗುಣಮಟ್ಟವನ್ನು ವೃದ್ಧಿಸಲು ಸುಧಾರಿತ ತಳಿಗಳ ಪಾತ್ರ ಕೀಟ ಮತ್ತು ರೋಗಗಳ ನಿರ್ವಹಣೆ ಬಗ್ಗೆ ಐಸಿಎಆರ್-ಐಐಎಸ್ಆದರ್ ವಿಜ್ಞಾನಿಗಳಿಂದ ಮಾಹಿತಿ ನೀಡಲಾಯಿತು.

Join Whatsapp