ತೋಕೂರು ಬಳಿ ತಡೆಗೋಡೆ ಕುಸಿತ: ರೈಲು ಸಂಚಾರ ವ್ಯತ್ಯಯ

Prasthutha|

ಮಂಗಳೂರು: ಮಂಗಳೂರು ಜಂಕ್ಷನ್ ಮತ್ತು ತೋಕೂರು ನಡುವಿನ ರೈಲು ಮಾರ್ಗದಲ್ಲಿ ಶುಕ್ರವಾರ ತಡೆಗೋಡೆ ಕುಸಿದಿದೆ.

- Advertisement -

ರೈಲ್ವೆ ಇಲಾಖೆ ಈ ಹಿಂದೆ ತಡೆಗೋಡೆ ನಿರ್ಮಿಸಿದ್ದರೂ ಭಾರೀ ಪ್ರಮಾಣದ ಗುಡ್ಡ ಕುಸಿದಿರುವುದರಿಂದ ತಡೆಗೋಡೆ ಜಾರಿ ಮಣ್ಣು ರೈಲು ಹಳಿಗಳ ಮೇಲೆ ಬಿದ್ದಿದೆ. ಭೂ ಕುಸಿತವಾಗಿರುವ ಹಿನ್ನೆಲೆಯಲ್ಲಿ ಈ ಹಳಿಯ ಮೂಲಕ ಚಲಿಸುವ ಎಲ್ಲಾ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಇನ್ನು ಮಣ್ಣು ತೆರವುಗೊಳಿಸುವ ಕಾರ್ಯಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ.



Join Whatsapp