ಜಮ್ಮು ಕಾಶ್ಮೀರದಾದ್ಯಂತ ಬಕ್ರೀದ್ ಸಂದರ್ಭದಲ್ಲಿ ಗೋಹತ್ಯೆ ನಿಷೇಧ!

Prasthutha|

ಶ್ರೀನಗರ: ಬಕ್ರೀದ್ ಸಂದರ್ಭದಲ್ಲಿ ಜಮ್ಮು- ಕಾಶ್ಮೀರದಾದ್ಯಂತ ಹಸು, ಕರು ಹಾಗೂ ಒಂಟೆಗಳ ಹತ್ಯೆಯನ್ನು ನಿಷೇಧಿಸಿ ಅಲ್ಲಿನ ಆಡಳಿತ ಆದೇಶ ಹೊರಡಿಸಿದೆ.

- Advertisement -

ಜಮ್ಮು- ಕಾಶ್ಮೀರದ ಪ್ರಾಣಿ ಸಾಕಾಣಿಕೆ ಮತ್ತು ಮೀನುಗಾರಿಕೆ ಇಲಾಖೆ ಈ ಆದೇಶವನ್ನು ಹೊರಡಿಸಿದ್ದು, ಹಸು, ಕರು, ಹೋರಿ, ಎತ್ತು ಹಾಗೂ ಒಂಟೆಗಳ ಹತ್ಯೆ ನಿಷೇಧದ ಕುರಿತ ಆದೇಶದ ಪ್ರತಿಯನ್ನು ಜಮ್ಮು ಕಾಶ್ಮೀರದ ವಿಭಾಗೀಯ ಆಯುಕ್ತರು ಮತ್ತು ಐಜಿಪಿಗಳಿಗೆ ರವಾನಿಸಲಾಗಿದೆ.

ಜು. 21ರಂದು ಆಚರಿಸಲಾಗುವ ಬಕ್ರೀದ್ ವೇಳೆಗೆ ಜಮ್ಮು-ಕಾಶ್ಮೀರದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಿ ಹತ್ಯೆಯಾಗುವ ಸಾಧ್ಯತೆ ಇದ್ದು, ಆ ಹಿನ್ನೆಲೆಯಲ್ಲಿ ಪ್ರಾಣಿ ಕಲ್ಯಾಣ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಮ್ಮು- ಕಾಶ್ಮೀರದ ಪ್ರಾಣಿ ಸಾಕಾಣಿಕೆ ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp