ನವದೆಹಲಿ : ಕೇಂದ್ರ ಸರಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಜ.26ರಂದು ನಡೆಸಲುದ್ದೇಶಿಸಿರುವ ‘ಟ್ರಾಕ್ಟರ್ ಪರೇಡ್’ ಕುರಿತ 2ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಪೊಲೀಸರು ಮತ್ತು ರೈತರ ನಡುವೆ ‘ಟ್ರಾಕ್ಟರ್ ಪರೇಡ್’ ಕುರಿತ ಮಾತುಕತೆ ನಡೆದಿತ್ತು.
ದೆಹಲಿಯ ಔಟರ್ ರಿಂಗ್ ರಸ್ತೆಯಲ್ಲಿ ರ್ಯಾಲಿಯನ್ನು ನಡೆಸುವ ಬೇಡಿಕೆಗೆ ರೈತರು ಅಂಟಿಕೊಂಡಿರುವುದರಿಂದ, ಇಂದು ನಡೆದ ಪೊಲೀಸರು ಮತ್ತು ರೈತರ ನಡುವಿನ 2ನೇ ಸುತ್ತಿನ ಮಾತುಕತೆ ವಿಫಲವಾಗಿದೆ.
ಈ ಕುರಿತಂತೆ ಸ್ವರಾಜ್ ಅಭಿಯಾನದ ನಾಯಕ ಯೋಗೇಂದ್ರ ಯಾದವ್ ಮಾಹಿತಿ ನೀಡಿದ್ದಾರೆ.
“ರೈತರು ಟ್ರಾಕ್ಟರ್ ಪರೇಡ್ ಅನ್ನು ದೆಹಲಿಯಿಂದ ಹೊರಗೆ ನಡೆಸಬೇಕು ಎಂದು ಪೊಲೀಸರು ಬಯಸಿದ್ದಾರೆ. ಆದರೆ, ಅದು ಸಾಧ್ಯವಿಲ್ಲ, ನಾವು ದೆಹಲಿಯೊಳಗೆ ನಮ್ಮ ಮೆರವಣಿಗೆಯನ್ನು ಶಾಂತಿಯುತವಾಗಿ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.