ಬಸ್ ನಲ್ಲಿ ಕಿರುಕುಳ ಪೋಸ್ಟ್ ವೈರಲ್ ಘಟನೆ | ಆರೋಪಿಯ ಬಂಧನ; ಯುವತಿಯಿಂದ ಕಪಾಳಮೋಕ್ಷ

Prasthutha|

ಮಂಗಳೂರು : ಕೆಲವು ದಿನಗಳ ಹಿಂದೆ ನಗರದ ದೇರಳಕಟ್ಟೆಯಿಂದ ಪಂಪ್ ವರೆಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ವಿಕೃತ ಕಾಮಿಯೊಬ್ಬ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಳಾಗಿದೆ. ಬಂಧಿತ ಆರೋಪಿ ಕಾಸರಗೋಡು ನಿವಾಸಿ ಹುಸೇನ್ (41) ಎಂದು ಗುರುತಿಸಲಾಗಿದೆ.

- Advertisement -

ಆರೋಪಿಯ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಕಮೀಷನರ್ ಪತ್ರಿಕಾಗೋಷ್ಠಿ ಕರೆದಿದ್ದರು. ಈ ವೇಳೆ ಆರೋಪಿಯನ್ನು ಮಾಧ್ಯಮದ ಮುಂದೆ ಕರೆತರಲಾಗಿತ್ತು. ಆಗ ಅಲ್ಲಿಯೇ ಇದ್ದ ಯುವತಿ ಆರೋಪಿಯನ್ನು ಕಂಡೊಡನೆ ಪೊಲೀಸರ ಎದುರೇ ಆತನಿಗೆ ಕಪಾಳಮೋಕ್ಷ ಮಾಡಿದ ಘಟನೆಯೂ ನಡೆಯಿತು.

ಬಂಧಿತ ಹುಸೇನ್ ಜ.14ರಂದು ಯುವತಿಗೆ ಬಸ್ ನಲ್ಲಿ ಪ್ರಯಾಣಿಸುವಾಗ ಆಕೆಯ ಮೈ ಮೇಲೆ ಕೈಹಾಕಿ ಕಿರುಕುಳ ನೀಡಿದ್ದ. ಇದಕ್ಕೆ ಯುವತಿ ಆಕ್ಷೇಪ ವ್ಯಕ್ತಪಡಿಸಿದಾಗ, ಬಸ್ ನಿಂದ ಇಳಿದು, ಮತ್ತೊಂದು ಬಸ್ ನಲ್ಲಿ ಹಿಂಬಾಲಿಸಿ, ಮತ್ತೊಂದು ನಿಲ್ದಾಣದಲ್ಲಿ ಮತ್ತೆ ಬಸ್ ಹತ್ತಿ, ಆಕೆಯ ಹಿಂದಿನ ಸೀಟಿನಲ್ಲಿ ಕುಳಿತು ಕಿರುಕುಳ ನೀಡಿದ್ದ.

- Advertisement -

ಈ ವೇಳೆಯೂ ಆಕೆ ಆಕ್ಷೇಪ ವ್ಯಕ್ತಪಡಿಸಿದಾಗ, ಈತ ಉದ್ಡತನ ಮೆರೆದಿದ್ದ. ಸೋಶಿಯಲ್ ಮೀಡಿಯಾದಲ್ಲಿ ವಿಷಯ ಹಾಕುವುದಾಗಿ ಹೇಳಿದ್ದಾಗ, ಮುಖದ ಮಾಸ್ಕ್ ತೆಗೆದು ಫೋಟೊ ತೆಗೆದುಕೊಳ್ಳುವಂತೆ ಹೇಳಿದ್ದ. ಫೋಟೊ ತೆಗೆದಾಗ ‘ಥ್ಯಾಂಕ್ಸ್’ ಎಂದಿದ್ದ. ಈ ಬಗ್ಗೆ ಯುವತಿ ತನ್ನ ಸೋಶಿಯಲ್ ಮೀಡಿಯಾ ಖಾತೆಯೊಂದರಲ್ಲಿ ಬರೆದುಕೊಂಡಿದ್ದಳು. ಇದು ವ್ಯಾಪಕ ವೈರಲ್ ಆಗಿತ್ತು.

ಯುವತಿಯ ದಿಟ್ಟತನಕ್ಕೆ ಮಂಗಳೂರು ನಗರ ಕಮೀಷನರ್ ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಸ್ ನಿರ್ವಾಹಕರಿಗೆ ನೋಟಿಸ್ ಕೂಡ ಜಾರಿಗೊಳಿಸಿದ್ದರು.   

Join Whatsapp