ವಿಲ್ಲಾ ವಿಚಾರವಾಗಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್’ಗೆ ಪ್ರವಾಸೋದ್ಯಮ ಇಲಾಖೆ ನೋಟಿಸ್

Prasthutha|

ಪಣಜಿ: ನೆಮೊರ್ಜಿಮ್ ನಲ್ಲಿ ತಮ್ಮ ವಿಲ್ಲಾವನ್ನು ನೋಂದಾಯಿಸದೆ ‘ಹೋಮ್’ಸ್ಟೇ ಆಗಿ ಪರಿವರ್ತಿಸಿದ್ದಕ್ಕೆ ಯುವರಾಜ್ ಸಿಂಗ್’ಗೆ ಗೋವಾ ಪ್ರವಾಸೋದ್ಯಮ ಇಲಾಖೆ ನೋಟಿಸ್ ನೀಡಿದೆ.

- Advertisement -

ರಾಜ್ಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಜೇಶ್ ಕಾಳೆ ಅವರು ಉತ್ತರ ಗೋವಾದ ಮೊರ್ಜಿಮ್’ನಲ್ಲಿರುವ ಯುವರಾಜ್ ಸಿಂಗ್ ಮಾಲೀಕತ್ವದ ವಿಲ್ಲಾ ‘ಕಾಸಾ ಸಿಂಗ್’ ವಿಳಾಸದಲ್ಲಿ ಯುವರಾಜ್ ಸಿಂಗ್ ಅವರಿಗೆ ಪ್ರವಾಸಿ ವ್ಯಾಪಾರ ನೋಂದಣಿ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿದ್ದು, ಡಿಸೆಂಬರ್ 8ರಂದು ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಗೋವಾ ಪ್ರವಾಸೋದ್ಯಮ ವ್ಯವಹಾರ ಕಾಯಿದೆ 1982 ರ ಅಡಿಯಲ್ಲಿ, ನೋಂದಣಿ ನಂತರವೇ ರಾಜ್ಯದಲ್ಲಿ ‘ ಹೋಮ್’ಸ್ಟೇ ‘ ಅನ್ನು ನಿರ್ವಹಿಸಬಹುದು ಎಂಬ ನಿಯಮವಿದೆ.



Join Whatsapp