ಆನ್’ಲೈನ್’ನಲ್ಲಿ ಡೈಪರ್ ಖರೀದಿಸಲು ಹೋಗಿ 50,000 ರೂ. ಕಳೆದು ಕೊಂಡ ವ್ಯಕ್ತಿ

Prasthutha|

ಬೆಂಗಳೂರು: ಆನ್’ಲೈನ್’ನಲ್ಲಿ ಡೈಪರ್ ಖರೀದಿಸಲು ಹೋಗಿ ಸೈಬರ್ ವಂಚಕರ ಬಲೆಗೆ ಬಿದ್ದು ವ್ಯಕ್ತಿಯೊಬ್ಬರು ರೂ.50,000 ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

- Advertisement -

ವೃತ್ತಿಯಲ್ಲಿ ಚಾಲಕರಾಗಿರುವ ಬೆಂಗಳೂರು-ರಾಮನಗರ ರಸ್ತೆಯ ನಿವಾಸಿ ಬಿಟಿ ಸಂತೋಷ್ ಕುಮಾರ್ ಸೈಬರ್ ವಂಚಕರಿಂದ ಹಣ ಕಳೆದುಕೊಂಡ ವ್ಯಕ್ತಿ.

ತಮ್ಮ ನವಜಾತ ಶಿಶುವಿಗೆ ಆನ್’ಲೈನ್’ನಲ್ಲಿ ಡೈಪರ್ ಖರೀದಿಸಲು ಮುಂದಾದ ವೇಳೆ ಸೈಬರ್ ವಂಚಕರು ಸಂತೋಷ್ ಅವರಿಗೆ ಕರೆ ಮಾಡಿ, ವಿಳಾಸ ಹಾಗೂ ಇತರೆ ಮಾಹಿತಿಗಳನ್ನು ಪಡೆದು, ಮೊಬೈಲಿಗೆ  ಲಿಂಕ್ ವೊಂದನ್ನು ಕಳುಹಿಸಿ ಅದನ್ನು ಕ್ಲಿಕ್ ಮಾಡುವಂತೆ ತಿಳಿಸಿದ್ದಾರೆ.

- Advertisement -

ಸಂತೋಷ್ ಅವರು ಆ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆಯೇ ಬ್ಯಾಂಕ್ ಯುಪಿಐ ಖಾತೆಯಿಂದ 50 ಸಾವಿರ ರೂ. ಹಣ ವಂಚಕರ ಖಾತೆಗೆ ವರ್ಗಾವಣೆಗೊಂಡಿದೆ. ಸಂತೋಷ್ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದಾಗ ಹಣ ವರ್ಗಾವಣೆಯಾಗಿದ್ದು ಗಮನಕ್ಕೆ ಬಂದಿದ್ದು, ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.

ವ್ಯಕ್ತಿಯ ಮೊಬೈಲ್ ಫೋನ್ ಹಾಗೂ ಇತರೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸಂತೋಷ್ ಅವರು ಕೂಡಲೇ ಬ್ಯಾಂಕ್’ಗೆ ಮಾಹಿತಿ ನೀಡಿ ಹಣ ವರ್ಗಾವಣೆಗೊಳ್ಳದಂತೆ ಮಾಡಬೇಕಿತ್ತು. ಆದರೆ, ಅವರು ಅದನ್ನು ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Join Whatsapp