ಮಾಸ್ಕೊ: ರಷ್ಯಾದ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಅಭಿವೃದ್ಧಿಪಡಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ವಿಜ್ಞಾನಿ ಆಂಡ್ರೆ ಬೊಟಿಕೋವ್ ಅವರು ತಾನು ವಾಸಿಸುತ್ತಿದ್ದ ಅಪಾರ್ಟ್ಮೆಂಟ್ನಲ್ಲಿ ಹತ್ಯೆಯಾಗಿದ್ದಾರೆ.
ಬೆಲ್ಟ್ನಿಂದ ಅವರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.
47 ವರ್ಷ ವಯಸ್ಸಿನ ಬೊಟಿಕೋವ್ ಅವರು ಗಾಮೇಲೆಯಾ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಕಾಲಜಿ ಆ್ಯಂಡ್ ಮ್ಯಾಥಮೆಟಿಕ್ಸ್ನ ಹಿರಿಯ ಸಂಶೋಧಕರಾಗಿದ್ದರು.
ಕೋವಿಡ್ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಕ್ಕಾಗಿ ಆಂಡ್ರೆ ಬೊಟಿಕೋವ್ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2021ರಲ್ಲಿ ‘ಆರ್ಡರ್ ಆಫ್ ಮೆರಿಟ್ ಫಾರ್ ದಿ ಫಾದರ್ಲ್ಯಾಂಡ್’ ಪ್ರಶಸ್ತಿ ನೀಡಿ ಗೌರವಿಸಿದ್ದರು. 2020ರಲ್ಲಿ ರಷ್ಯಾದ 18 ವಿಜ್ಞಾನಿಗಳ ತಂಡ ಸ್ಪುಟ್ನಿಕ್ ವಿ ಲಸಿಕೆ ಅಭಿವೃದ್ಧಿಪಡಿಸಿತ್ತು. ಈ ತಂಡದಲ್ಲಿ ಬೊಟಿಕೋವ್ ಪ್ರಮುಖ ಪಾತ್ರ ವಹಿಸಿದ್ದರು.