ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾಗುವಂತೆ ಸಾಂವಿಧಾನಿಕ ಸಂಸ್ಥೆಗಳಿಗೆ ಅಗ್ರಗಣ್ಯ ಪತ್ರಕರ್ತರ ಒತ್ತಾಯ

Prasthutha|

ನವದೆಹಲಿ: ಪ್ರಚಲಿತ ದೇಶದಲ್ಲಾಗುತ್ತಿರುವ ಮಿತಿಮೀರಿದ ಅಲ್ಪಸಂಖ್ಯಾತ ವಿರೋಧಿ ಧೋರಣೆಯನ್ನು ಖಂಡಿಸಿ, ಅಲ್ಪಸಂಖ್ಯಾತರನ್ನು ರಕ್ಷಿಸುವ ಎಲ್ಲಾ ಕಾರ್ಯಯೋಜನೆಗೆ ಮುಂದಡಿಯಿಡಬೇಕೆಂದು ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳಿಗೆ ದೇಶದ ವಿವಿಧ ಅಗ್ರಗಣ್ಯ ಪತ್ರಕರ್ತರು ಒತ್ತಾಯಿಸಿದ್ದಾರೆ.

- Advertisement -


ಪತ್ರದ ಮೂಲಕ ಮನವಿ ಮಾಡಿರುವ ಅವರು “ಭಾರತದಾದ್ಯಂತ ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಮರ ಮೇಲಿನ ದಾಳಿಗಳಿಗೆ ವಿವಿಧ ವಲಯಗಳಿಂದ ನರಮೇಧಗಳ ಮುಕ್ತ ಕರೆಗಳು ನೀಡುತ್ತಿರುವ ಹಿನ್ನೆಲೆಯಲ್ಲಿ, ಅವರ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ಮತ್ತು ಅವರ ಸಂಪೂರ್ಣ ರಕ್ಷಣಾಕಾರ್ಯದಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ನಾವು ಎಲ್ಲಾ ಭಾರತೀಯ ಸಾಂವಿಧಾನಿಕ ಸಂಸ್ಥೆಗಳಿಗೆ ಈ ಮನವಿಯನ್ನು ಮಾಡುತ್ತಿದ್ದೇವೆ” ಎಂದು ಕೋರಿದ್ದಾರೆ.


“ಆವೇಶ ಪೂರಕವಾದ ಉದ್ಘರ್ಷದ ದ್ವೇಷಕ್ಕೆ ಮೌನದ ಆಯ್ಕೆಯು ಸಮಂಜಸವಲ್ಲ. ಸಾಮುದಾಯಿಕ ಹಿಂಸಾಚಾರ ಅಥವಾ ಸಾಮಾಜಿಕ – ಆರ್ಥಿಕ ಬಹಿಷ್ಕಾರಕ್ಕೆ ಮುಕ್ತವಾಗಿ ಕರೆಗಳು ನೀಡುತ್ತಿರುವುದು ವಾಕ್ ಸ್ವಾತಂತ್ರ್ಯಕ್ಕೆ ನೀಡಿರುವ ಸಾಂವಿಧಾನಿಕ ಹಕ್ಕಿನ ದುರುಪಯೋಗವಾಗಿದೆ” ಎಂದೂ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -


ಮನವಿ ಮಾಡಿದ ಪತ್ರಕರ್ತರು :
ರಾಮ್ (ಮಾಜಿ ಪ್ರಧಾನ ಸಂಪಾದಕರು, ದಿ ಹಿಂದೂ ಮತ್ತು ನಿರ್ದೇಶಕರು, ದಿ ಹಿಂದೂ ಪಬ್ಲಿಷಿಂಗ್ ಗ್ರೂಪ್), ಮೃಣಾಲ್ ಪಾಂಡೆ (ಹಿರಿಯ ಪತ್ರಕರ್ತೆ ಮತ್ತು ಲೇಖಕಿ), ರಾಜಗೋಪಾಲ್ (ಸಂಪಾದಕರು, ದಿ ಟೆಲಿಗ್ರಾಫ್), ವಿನೋದ್ ಜೋಸ್ (ಕಾರ್ಯನಿರ್ವಾಹಕ ಸಂಪಾದಕ, ಕಾರವಾನ್), ಆರ್ ವಿಜಯಶಂಕರ್ ( ಸಂಪಾದಕರು, ಫ್ರಂಟ್ ಲೈನ್), ಡಬ್ಲ್ಯು. ನಖ್ವಿ (ಚೇರ್ಮ್ಯಾನ್ ಮತ್ತು ಎಮ್ ಡಿ, ಸತ್ಯ ಹಿಂದಿ), ಅಶುತೋಷ್ (ಸಂಪಾದಕೀಯ ನಿರ್ದೇಶಕ, ಸತ್ಯ ಹಿಂದಿ), ಸಿದ್ಧಾರ್ಥ್ ವರದರಾಜನ್, (ಸ್ಥಾಪಕ ಸಂಪಾದಕರು, ದಿ ವೈರ್), ಸಿದ್ಧಾರ್ಥ್ ಭಾಟಿಯಾ ( ಸ್ಥಾಪಕ ಸಂಪಾದಕರು, ದಿ ವೈರ್), ಎಂ.ಕೆ.ವೇಣು (ಸ್ಥಾಪಕ ಸಂಪಾದಕರು, ದಿ ವೈರ್), ಅಜೀಜ್ ಟಂಕರ್ವಿ( ಪ್ರಕಾಶಕರು, ಗುಜರಾತ್ ಟುಡೆ), ರವೀಂದ್ರ ಅಂಬೇಕರ್ ( ನಿರ್ದೇಶಕರು, ಮ್ಯಾಕ್ಸ್ ಮಹಾರಾಷ್ಟ್ರ), ಆರ್.ಕೆ. ರಾಧಾಕೃಷ್ಣನ್ ( ಹಿರಿಯ ಪತ್ರಕರ್ತ), ದೀಪಲ್ ತ್ರಿವೇದಿ (ಸಂಸ್ಥಾಪಕ ಸಂಪಾದಕ: ವೈಬ್ಸ್ ಆಫ್ ಇಂಡಿಯಾ, ಗುಜರಾತ್), ಹಸನ್ ಕಮಲ್, (ಹಿರಿಯ ಪತ್ರಕರ್ತ ಮತ್ತು ಅಂಕಣಕಾರ, ಇಂಕ್ವಿಲಾಬ್), ತೀಸ್ತಾ ಸೆಟಲ್ವಾಡ್,( ಸಹ-ಸಂಪಾದಕರು, ಸಬ್ರಂಗಿಂಡಿಯಾ), ಜಾವೇದ್ ಆನಂದ್, (ಸಹ-ಸಂಪಾದಕರು, ಸಬ್ರಂಗಿಂಡಿಯಾ), ಪ್ರದೀಪ್ ಫಂಜೌಬಮ್ ( ಸಂಪಾದಕರು, ಇಂಫಾಲ್ ರಿವ್ಯೂ ಆಫ್ ಆರ್ಟ್ಸ್ ಅಂಡ್ ಪಾಲಿಟಿಕ್ಸ್), ಅನುರಾಧಾ ಭಾಸಿನ್, (ಕಾರ್ಯನಿರ್ವಾಹಕ ಸಂಪಾದಕರು, ಕಾಶ್ಮೀರ್ ಟೈಮ್ಸ್), ಕಲ್ಪನಾ ಶರ್ಮಾ( ಸ್ವತಂತ್ರ ಪತ್ರಕರ್ತೆ), ಔನಿಂದ್ಯೋ ಚಕ್ರವರ್ತಿ( ಸ್ವತಂತ್ರ ಪತ್ರಕರ್ತ), ಸಬಾ ನಖ್ವಿ (ಸ್ವತಂತ್ರ ಪತ್ರಕರ್ತ), ಧನ್ಯ ರಾಜೇಂದ್ರನ್ (ಮುಖ್ಯ ಸಂಪಾದಕರು, ದಿ ನ್ಯೂಸ್ ಮಿನಿಟ್), ಶಬೀರ್ ಅಹಮದ್( ಹಿರಿಯ ಸುದ್ದಿ ಸಂಪಾದಕ, ದಿ ನ್ಯೂಸ್ ಮಿನಿಟ್), ಅನಿರ್ಬನ್ ರಾಯ್( ಸಂಪಾದಕರು, ಈಶಾನ್ಯ ನೌ, ಗುವಾಹಟಿ), ಧೀರೇನ್ ಎ. ಸದೋಕ್ಪಮ್, (ಪ್ರಧಾನ ಸಂಪಾದಕರು, ದಿ ಫ್ರಾಂಟಿಯರ್, ಮಣಿಪುರ), ಟಾಂಗಮ್ ರಿನಾ, (ಪತ್ರಕರ್ತೆ, ಅರುಣಾಚಲ ಪ್ರದೇಶ), ಮೊನಾಲಿಸಾ ಚಾಂಗ್ಕಿಜಾ ( ಸಂಪಾದಕಿ, ನಾಗಾಲ್ಯಾಂಡ್ ಪುಟ).

Join Whatsapp