‘ನಾಳೆ‌ ಸಂಜೆ ದೊಡ್ಡ ಮಟ್ಟದ ಸುದ್ದಿ ಕೊಡುತ್ತೇನೆ’ : ರಮೇಶ್ ಜಾರಕಿಹೊಳಿ ಹೊಸ ಬಾಂಬ್

Prasthutha: March 26, 2021

►ಡಿಕೆಶಿ ರಾಜೀನಾಮೆ ಕೊಡಬಾರದು ಎಂದ ಜಾರಕಿಹೊಳಿ

ಬೆಂಗಳೂರು : ಸಿಡಿ ಲೇಡಿಯ ಆಡಿಯೋ ಬಿಡುಗಡೆ ಆದ ಬಳಿಕ ಮತ್ತೊಮ್ಮೆ ಮನೆಯಿಂದ ಹೊರಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ‌ ಸಶಿವ ರಮೇಶ್ ಜಾರಕಿಹೊಳಿ, ಮಾಧ್ಯಮ ಮಿತ್ರರೇ, ನಾಳೆ ಸಂಜೆ 4 ರಿಂದ 6 ಗಂಟೆಯ ಒಳಗೆ ದೊಡ್ಡ ಸುದ್ದಿ ಕೊಡುವೆ. ನಾನು ಒಂದೇ ಶಬ್ದ ಮಾತಾಡುವೆ’ ಎಂದು ಹೇಳಿದ್ದಾರೆ.

ಸಿಡಿ ಲೇಡಿ ತನ್ನ ಸಹೋದರನೊಂದಿಗೆ ಮಾತನಾಡಿರುವ ಆಡಿಯೋ ಒಂದು ಬಹಿರಂಗವಾಗಿದ್ದು, ಅದರಲ್ಲಿ ಆಕೆ ಡಿಕೆ ಶಿವಕುಮಾರ್ ಕಡೆಯವರು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈ ಕುರಿತು ಪ್ರಶ್ನೆ ಕೇಳಿದಾಗ ಡಿಕೆ ಶಿವಕುಮಾರ್ ನನ್ನ ಹಳೆಯ ಗೆಳೆಯ. ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಬೇಕು. ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು. ನಾನು ದೈವ ಭಕ್ತ, ಆರೋಪದಿಂದ ಹೊರಬರುವೆ. ನಾನು ಯಾರಿಗೂ ತೊಂದರೆ ಕೊಡಲ್ಲ. ನಾನು ಜಾಮೀನು ತಗೆದುಕೊಳ್ಳುವುದಿಲ್ಲ.  FIR ಆದ ಮಾತ್ರಕ್ಕೆ ನಾನು ಅಪರಾಧಿಯಲ್ಲ. ನಾಳೆ  ಸಂಜೆ 4 ರಿಂದ 6 ಗಂಟೆ ವರೆಗೆ ಕಾಯಿರಿ.  ಸದಾಶಿವನಗರದ ಜನತೆ ಈ ಬೆಳವಣಿಗೆಯಿಂದ 15 ದಿನದಿಂದ ರೊಸಿ ಹೋಗಿದ್ದಾರೆ ಎಂದು ಜಾರಕಿಹೊಳಿ ಹೇಳಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!