ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷರಾಗಿ ಎಂ.ಎಸ್ ಸಾಜಿದ್ ಆಯ್ಕೆ

Prasthutha|

ಮಲಪ್ಪುರಂ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾಗಿ ಎಂ.ಎಸ್.ಸಾಜಿದ್(ಕೇರಳ) ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಾನ್ ಸಾದಿಕ್ (ಕರ್ನಾಟಕ) ಆಯ್ಕೆಯಾಗಿದ್ದಾರೆ. ಮಲಪ್ಪುರಂ ಪುತ್ತನತ್ತಾಣಿಯಲ್ಲಿ ನಡೆದ ಎರಡು ದಿನಗಳ ನ್ಯಾಷನಲ್ ಜನರಲ್ ಕೌನ್ಸಿಲ್( NGC)ನ್ನು ರಾಷ್ಟ್ರೀಯ ಅಧ್ಯಕ್ಷ ಎಂ.ಎಸ್.ಸಾಜಿದ್ ಉದ್ಘಾಟಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಂ.ಎಸ್. ಸಾಜಿದ್, ದೇಶದಲ್ಲಿ ಅಸಮಾನತೆ ಮತ್ತು ಅಭದ್ರತೆ ಹೆಚ್ಚಾದಂತೆ ವಿದ್ಯಾರ್ಥಿ ಸಮುದಾಯವು ಪ್ರಜಾಪ್ರಭುತ್ವ ಸಂರಕ್ಷಣಾ ಚಳುವಳಿಗಳು ಮತ್ತು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಳ್ಗೊಳ್ಳಬೇಕು ಎಂದು ಅವರು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕೆ.ಎಚ್.​​ಅಬ್ದುಲ್ ಹಾದಿ ಮತ್ತು ಹೋಮಾ ಕೌಸರ್ ಉಪಾಧ್ಯಕ್ಷರಾಗಿ, ಟಿ ಅಬ್ದುಲ್ ನಾಸರ್ ಮತ್ತು ಸದಕತುಲ್ಲಾ ಷಾ ಕಾರ್ಯದರ್ಶಿಗಳಾಗಿ ಹಾಗೂ ಜಾಹಿದುಲ್ ಇಸ್ಲಾಂ ಖಜಾಂಜಿಯಾಗಿ ಆಯ್ಕೆಯಾದರು.

- Advertisement -

ಅತೀಕುರ್ರಹಮಾನ್, ಕೆ.ಎ.ರೌಫ್ ಷರೀಫ್, ಸೈಫ್ ರಹಮಾನ್, ಇಮ್ರಾನ್ ಪಿಜೆ, ಫಾತಿಮಾ ಶೆರಿನ್, ಪಿ.ವಿ.ಶೊಹೈಬ್, ನಿಶಾ ತಮಿಳುನಾಡು ಮತ್ತು ಫರ್ಹಾನ್ ಕೋಟಾ ಅವರು ರಾಷ್ಟ್ರೀಯ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.

- Advertisement -