ಜೀವಂತ ಸಮಾಧಿಯಾದರೆ ಏಸುವನ್ನು ಭೇಟಿಯಾಗಬಹುದು ಎಂದಿದ್ದ ಪಾದ್ರಿ| ಸಾವಿನ ಸಂಖ್ಯೆ 110ಕ್ಕೆ ಏರಿಕೆ

Prasthutha|

ಮಲಿಂಡಿ: ಉಪವಾಸವಿದ್ದು ಜೀವಂತ ಸಮಾಧಿಯಾದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ, ಏಸುವನ್ನು ನೋಡಬಹುದು ಎಂದು ಪಾದ್ರಿಯೊಬ್ಬರು ಹೇಳಿದ್ದ ಮಾತು ನಂಬಿ ಮಕ್ಕಳು ಸೇರಿದಂತೆ ಜೀವಂತ ಸಮಾಧಿಯಾದವರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.

- Advertisement -

ಕೀನ್ಯಾದ ಕರಾವಳಿ ಪಟ್ಟಣವಾದ ಮಲಿಂಡಿ ಬಳಿ ಪೊಲೀಸರು ಕನಿಷ್ಠ 110 ಶವಗಳನ್ನು ಹೊರತೆಗೆದಿದ್ದಾರೆ, ಮತ್ತಷ್ಟು ಮೃತದೇಹಗಳು ದೊರೆಯುವ ನಿರೀಕ್ಷೆ ಇದೆ. ಆಸ್ಪತ್ರೆಯ ಶವಾಗಾರ ತುಂಬಿದ್ದರಿಂದ ನಾಲ್ಕು ದಿನಗಳ ಕಾಲ ಶವಗಳ ಹುಡುಕಾಟವನ್ನು ನಿಲ್ಲಿಸಲಾಗಿತ್ತು. ಕಳೆದ ಎರಡು ದಿನಗಳಲ್ಲಿ ಐವರು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಯಾರಾದರೂ ಬದುಕಿರಬಹುದೆಂಬ ನಿರೀಕ್ಷೆಯಲ್ಲಿ ಪೊಲೀಸರು ಸಮಾಧಿಯನ್ನು ಅಗೆಯುತ್ತಿದ್ದಾರೆ.

- Advertisement -

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪಾಲ್ ಮೆಕೆಂಜಿ ಎಂಬ ಪಾದ್ರಿಯನ್ನು ಈಗಾಗಲೇ ಬಂಧಿಸಿದ್ದಾರೆ.