ನಾರಾಯಣ ಗುರುವಿಗೆ ಬಿಜೆಪಿ ಮಾಡಿದ ಅವಮಾನ ಈ‌ ಚುನಾವಣೆಯಲ್ಲಿ ಪ್ರತಿ ಫಲಿಸಲಿದೆ: ಯಾದವ್ ಕೋಟ್ಯಾನ್ ವಿಶ್ವಾಸ

Prasthutha|

ಮಂಗಳೂರು : ಹಿಂದೆ ಕರ್ನಾಟಕ ರಾಜ್ಯೋತ್ಸವ ಸಂದರ್ಭ ವಿವಿಧ ನಾಯಕರ ಟ್ಯಾಬ್ಲೋ ಪ್ರದರ್ಶನ ವೇಳೆ ಬ್ರಹ್ಮಶ್ರೀ  ಪರಮ ಪೂಜ್ಯ ನಾರಾಯಣ ಗುರುಗಳ ಟ್ಯಾಬ್ಲೋ ಪ್ರದರ್ಶನಕ್ಕೆ ಅವಕಾಶ ನೀಡದ ರಾಜ್ಯ ಬಿಜೆಪಿ‌ ಸರ್ಕಾರ , ಹಿಂದುಳಿದ ವಿಭಾಗಗಳ ಯುವಕರನ್ನು ಕೋಮುವಾದದ ಅಮಲಿನಲ್ಲಿ ಮುಳುಗಿಸಿ, ಜೈಲು, ಕೋರ್ಟ್ , ಕಚೇರಿಗೆ ಅಲೆದಾಡಿಸಿ, ರಾಜಕೀಯ ಲಾಭಕ್ಕಾಗಿ ಬಲಸುವ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರ ಬಗ್ಗೆ ಯುವಕರು ಈ ಬಾರಿ ಮನದಲ್ಲಿಟ್ಟು ಯೋಚಿಸಿ ಮತನೀಡಬೇಕೆಂದು ಕರ್ನಾಟಕ ರಾಜ್ಯ  ಜನತಾದಳ ಹಿಂದುಳಿದ ವಿಭಾಗಗಳ ಉಪಾಧ್ಯಕ್ಷ  ಯಾದವ ಕೋಟ್ಯಾನ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

- Advertisement -

  ಮಂಗಳೂರು  ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ  ಜೆಡಿಎಸ್ ಅಭ್ಯರ್ಥಿ ಡಾ. ಸುಮತಿ ಹೆಗ್ಡೆಯವರೊಂದಿಗೆ ಮಂಗಳಾದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಈ ಸಂಧರ್ಭ ರಾಜ್ಯ ಜೆಡಿಎಸ್ ಮೀನುಗಾರಿಕಾ ಅಧ್ಯಕ್ಷ ರತ್ನಾಕರ ಸುವರ್ಣ , ರಾಜ್ಯ ಯುವ ಜನತಾದಳ ಮುಖಂಡ ಶ್ರೀನಾಥ್ ರೈ ,ಅಲ್ತಾಫ್ ತುಂಬೆ ಹಾಗೂ ಪಕ್ಷದ ಕಾರ್ಯಕರ್ತರು  ಉಪಸ್ಥಿತರಿದ್ದರು.