ಇಂದು ಮದ್ಯರಾತ್ರಿಯಿಂದ ಏರಿಕೆಯಾಗಲಿದೆ ಟೋಲ್ ದರ!

Prasthutha|

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಐ) ಇಂದು ಮದ್ಯರಾತ್ರಿಯಿಂದ 12 ಗಂಟೆಯ ನಂತರ ಟೋಲ್ ತೆರಿಗೆಯನ್ನು ಶೇ10 ರಿಂದ 25 ರವರೆಗೆ ಹೆಚ್ಚಳ ಮಾಡಿದೆ.

- Advertisement -

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸಣ್ಣ ವಾಹನಗಳಿಗೆ 10-15 ರೂ., ವಾಣಿಜ್ಯ ವಾಹನಗಳ ಟೋಲ್ ತೆರಿಗೆ 25 ರೂ. ಹೆಚ್ಚಳವಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ಪ್ರಯಾಣಿಸುತ್ತಿದ್ದರೆ, ಈಗ ನೀವು ನಿಮ್ಮ ಟೋಲ್ ತೆರಿಗೆಯಾಗಿ ಹೆಚ್ಚು ಹಣ ಪಾವತಿ ಮಾಡಬೇಕಾಗಿದೆ.

ಸರಾಯ್ ಕಾಲೇಖಾನ್‌ನಿಂದ ಕಾಶಿ ಟೋಲ್ ಪ್ಲಾಜಾದವರೆಗೆ ಮೊದಲು ಕಾರು ಮತ್ತು ಜೀಪ್‌ಗೆ 140 ರೂ. ಪಾವತಿಸಬೇಕಾಗಿತ್ತು ಈಗ 155 ರೂ. ಹಾಗೂ ರಸೂಲ್‌ಪುರ್ ಸಿಕ್ರೋಡ್ ಪ್ಲಾಜಾದಲ್ಲಿ ಸರಾಯ್ ಕಾಲೇ ಖಾನ್‌ನಿಂದಲೇ ಈಗ ಚಾಲಕರು 100 ಪಾವತಿಸಬೇಕಾಗುತ್ತದೆ, ಆದರೆ ಭೋಜ್‌ಪುರಕ್ಕೆ 130 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ.

- Advertisement -

ಲಕ್ನೋಗೆ ಸಂಪರ್ಕಿಸುವ ಅಸ್ತಿತ್ವದಲ್ಲಿರುವ 6 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹರ್ದೋಯ್ ಹೆದ್ದಾರಿಯಲ್ಲಿ ಪ್ರಸ್ತುತ ಯಾವುದೇ ಟೋಲ್ ಬ್ಲಾಕ್ ಇಲ್ಲ, ಆದರೆ ಬದಲಾದ ಟೋಲ್ ದರಗಳು ಅಕ್ಟೋಬರ್‌ನಿಂದ ಸೀತಾಪುರದಲ್ಲಿ ಜಾರಿಗೆ ಬರಲಿವೆ. ಇವೆರಡನ್ನು ಹೊರತುಪಡಿಸಿ ಕಾನ್ಪುರ, ಅಯೋಧ್ಯೆ, ರಾಯ್ ಬರೇಲಿ, ಸುಲ್ತಾನ್ ಪುರಕ್ಕೆ ಹೋಗಬೇಕಾದರೆ ಇಂದು ರಾತ್ರಿಯಿಂದ ಜನರು ಹೆಚ್ಚಿದ ದರದಲ್ಲಿ ಟೋಲ್ ತೆರಿಗೆ ಪಾವತಿಸಬೇಕಾಗುತ್ತದೆ. ಲಕ್ನೋ ರಾಯ್ ಬರೇಲಿ ಹೆದ್ದಾರಿಯಲ್ಲಿ ಈಗ ಸಣ್ಣ ವಾಹನಗಳಿಗೆ 105 ರೂ., ಬಸ್-ಟ್ರಕ್‌ಗೆ 360 ರೂ. ದರ ನಿಗದಿಸಲಾಗಿದೆ.

ಲಕ್ನೋದಿಂದ ಅಯೋಧ್ಯೆಗೆ ಹೋಗುವ ವಾಹನಗಳು ಈಗ ಸಣ್ಣ ಖಾಸಗಿ ವಾಹನಗಳಿಗೆ 110 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ, ಆದರೆ ಟ್ರಕ್‌ಗಳು ಅಥವಾ ಬಸ್‌ಗಳಿಗೆ 365 ರೂಪಾಯಿಗಳನ್ನು ಇಲ್ಲಿ ವಿಧಿಸಲಾಗುತ್ತದೆ. ಲಕ್ನೋ-ಕಾನ್ಪುರ ಹೆದ್ದಾರಿಯಲ್ಲಿರುವ ನವಾಬ್‌ಗಂಜ್ ಪ್ಲಾಜಾ ಕೂಡ ದುಬಾರಿಯಾಗಿದ್ದು, ಇದರಲ್ಲಿ ಸಣ್ಣ ವಾಹನಗಳಿಗೆ 90 ರೂ. ಮತ್ತು ವಾಣಿಜ್ಯ ವಾಹನಗಳಿಗೆ 295 ರೂ. ಅದೇ ಮಾರ್ಗದಲ್ಲಿ, ಲಕ್ನೋದಿಂದ ಸುಲ್ತಾನ್‌ಪುರ ಹೆದ್ದಾರಿಯವರೆಗೆ, ಈಗ ನೀವು ಸಣ್ಣ ವಾಹನಗಳಿಗೆ 95 ರೂ ಮತ್ತು ಡಬಲ್ ಆಕ್ಸಲ್ ವಾಹನಗಳಿಗೆ 325 ರೂ ಪಾವತಿಸಬೇಕಾಗುತ್ತದೆ ಇದರಿಂದ ಜನತೆ ಟೋಲ್‌ಗಾಗಿ ಹೆಚ್ಚುವರಿ ಹಣ ಪಾವತಿಸಬೇಕಾಗಿದೆ.

Join Whatsapp