ಟೋಕಿಯೋ ಒಲಿಂಪಿಕ್ಸ್ ಬ್ಯಾಡ್ಮಿಂಟನ್ : ಕ್ವಾರ್ಟರ್ ಫೈನಲ್’ಗೆ ಪಿ.ವಿ.ಸಿಂಧು

Prasthutha|

ಟೋಕಿಯೋ, ಜು.29; ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿರುವ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಕ್ವಾರ್ಟರ್‌ ಫೈನಲ್‌ ಗೆ ಪ್ರವೇಶಿಸಿದ್ದಾರೆ.

- Advertisement -

ಗುರುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪ್ರಿ-ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ವಿಶ್ವ ನಂ.7 ರಾಂಕ್‌ ನ ಸಿಂಧು, 13ನೇ ಶ್ರೇಯಾಂಕಿತೆ ಡೆನ್ಮಾರ್ಕ್‌ ನ ಮಿಯಾ ಬ್ಲಿಚ್‌ ಫೆಲ್ಟ್ ವಿರುದ್ಧ 21-15 21-13ರ ಅಂತರದ ಗೆಲುವು ದಾಖಲಿಸಿದರು.
ಅಮೋಘ ಆಟ ಪ್ರದರ್ಶಿಸಿದ ಸಿಂಧು 41 ನಿಮಿಷಗಳಲ್ಲಿ ಪಂದ್ಯ ವಶಪಡಿಸಿಕೊಂಡರು.

26 ವರ್ಷದ ಸಿಂಧು ಅಂತಿಮ ಎಂಟರ ಘಟ್ಟದ ಹೋರಾಟದಲ್ಲಿ ಜಪಾನ್‌ ನ ಅಕಾನೆ ಯಮಗುಚಿ ಹಾಗೂ ಕೊರಿಯಾದ ಕಿಮ್ ಗಾಯೂನ್ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

- Advertisement -

‘ನಾನು ಮೊದಲ ಗೇಮ್‌ ನಲ್ಲಿ ಉತ್ತಮವಾಗಿ ಆಡುತ್ತಿದ್ದೆ. ಆದರೆ ಒಂದು ಹಂತದಲ್ಲಿ ತೀರಾ ರಕ್ಷಣಾತ್ಮಕವಾಗಿ ಆಡುತ್ತಿರುವುದನ್ನು ಗಮನಿಸಿದ ಕೋಚ್ ಎಚ್ಚರಿಸಿದರು. ಬಳಿಕ ನನ್ನ ಗೇಮ್’ ಪ್ಲಾನ್ ಬದಲಾಯಿಸಿದೆ. ಎರಡನೇ ಗೇಮ್‌ ನಲ್ಲೂ ಉತ್ತಮ ಪ್ರದರ್ಶನ ನೀಡಿ ಪಂದ್ಯ ಗೆಲ್ಲಲು ಸಾಧ್ಯವಾಯಿತು’ ಎಂದು ಸಿಂಧು ಪ್ರತಿಕ್ರಿಯಿಸಿದರು.

Join Whatsapp