ಇಂದು ಯೇಸು ಕ್ರಿಸ್ತನ ಜನ್ಮದಿನ| ನಾಡಿನೆಲ್ಲೆಡೆ ಕ್ರಿಸ್​ಮಸ್​ ಸಂಭ್ರಮ

Prasthutha|

ಬೆಂಗಳೂರು:  ನಾಡಿನೆಲ್ಲೆಡೆ ಇಂದು ಕ್ರಿಸ್ ಮಸ್ ಸಂಭ್ರಮ. ನಿನ್ನೆ ತಡರಾತ್ರಿಯಿಂದಲೇ ಎಲ್ಲೆಡೆ ಕ್ರಿಸ್ ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.

- Advertisement -

ಶಾಂತಿ, ಸೌಹಾರ್ದತೆಯ ಸಂಕೇತವಾಗಿ ಮಧ್ಯರಾತ್ರಿ 12ಕ್ಕೆ ಸರಿಯಾಗಿ ಪಟಾಕಿ ಸಿಡಿಸುವ ಮೂಲಕ ಕ್ರೈಸ್ತರು ಕ್ರಿಸ್​​​ಮಸ್​ ಹಬ್ಬವನ್ನು ಬರಮಾಡಿಕೊಂಡರು. ಅಲ್ಲದೆ, ಕ್ರೈಸ್ತರು ಚರ್ಚ್​​​ಗಳಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಯೇಸುವಿಗೆ ನಮನ ಸಲ್ಲಿಸುತ್ತಿದ್ದಾರೆ.

ಕ್ರಿಸ್ಮಸ್ ಸಂದರ್ಭದಲ್ಲಿ ದಾನ ಮಾಡುವುದಕ್ಕೂ ವಿಶೇಷ ಮಹತ್ವವಿದೆ. ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ದಾನಗಳನ್ನು ಮಾಡಬೇಕು. ಇಂಥ ಕಾರ್ಯಕ್ಕೆ ದೇವರ ಆಶೀರ್ವಾದ ಸದಾ ಇರುತ್ತದೆ ಎಂಬುದು ಕ್ರಿಶ್ಚಿಯನ್ನರ ಅಚಲ ನಂಬಿಕೆ.

- Advertisement -

ಚರ್ಚ್‌ಗಳಲ್ಲಿ ಪ್ರತ್ಯೇಕ ಪ್ರಾರ್ಥನೆಗಳು, ಮೆರವಣಿಗೆ ಮತ್ತು ಗೋದಲಿ, ಕ್ರಿಸ್ಮಸ್ ಟ್ರೀ, ಸ್ಟಾರ್‌ಗಳ ಪ್ರದರ್ಶನಗಳೊಂದಿಗೆ ಆಚರಣೆ ಮಾಡಲಾಗುತ್ತದೆ. ಸಾಂತಾಕ್ಲಾಸ್ ವೇಷಧಾರಿ, ಹಿರಿಯರು, ಪೋಷಕರು, ನೆರೆಹೊರೆಯವರು, ಸ್ನೇಹಿತರು ಮತ್ತು ಹಿತೈಷಿಗಳು ಮಕ್ಕಳಿಗೆ ಉಡುಗೊರೆಗಳನ್ನು ಕೊಡುತ್ತಾರೆ. ಈ ದಿನ ಮನೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಕೇಕ್ ಮತ್ತು ಮಫಿನ್‌, ಬಗೆಬಗೆಯ ತಿಂಡಿಗಳು, ಭೋಜನ ಸವಿಯಲು ಮಕ್ಕಳಿಗೆ ಅವಕಾಶ ಸಿಗುತ್ತದೆ.

Join Whatsapp