ನೋಟ್ ಬ್ಯಾನ್ ಎಂಬ ರಾಷ್ಟ್ರೀಯ ದುರಂತ ಸಂಭವಿಸಿ ಇಂದಿಗೆ 6 ವರ್ಷ, ಸಂಭ್ರಮಾಚರಣೆ ನಡೆಸುವುದಿಲ್ಲವೇ?:  ಬಿಜೆಪಿಯನ್ನು ಕುಟುಕಿದ ಕಾಂಗ್ರೆಸ್

Prasthutha|

ಬೆಂಗಳೂರು: ನೋಟ್ ಬ್ಯಾನ್ ಕಪ್ಪು ಹಣವನ್ನು ಮಟ್ಟ ಹಾಕಲು ಕೈಗೊಂಡ ದಿಟ್ಟ ನಿರ್ಧಾರ ಎಂದಿತ್ತು ಬಿಜೆಪಿ. ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಠೇವಣಿ ಏರಿಕೆಯಾಗಿದೆ, ಕಳೆದ 13 ವರ್ಷದಲ್ಲೇ ಹೆಚ್ಚು ಹಣ ಸ್ವಿಸ್ ಬ್ಯಾಂಕಿಗೆ ಹೋಗಿದೆ ಎಂಬ ವರದಿಗೆ ಬಿಜೆಪಿ ಬಾಯಿ ಬಿಡದಿರುವುದೇಕೆ? ಭಾರತೀಯರ ಬದುಕು ಕಸಿದ ನೋಟ್ ಬ್ಯಾನ್ನಿಂದಾದ ಲಾಭವೇನು ಬಿಜೆಪಿಯವರೇ?

- Advertisement -

ನೋಟ್ ಬ್ಯಾನ್ ಎಂಬ ರಾಷ್ಟ್ರೀಯ ದುರಂತ ಸಂಭವಿಸಿ ಇಂದಿಗೆ 6 ವರ್ಷ. ಸಂಭ್ರಮಾಚರಣೆ ನಡೆಸುವುದಿಲ್ಲವೇ ಬಿಜೆಪಿಯವರೇ?

ನೂರಾರು ಜನರ ಜೀವ ಬಲಿ,

- Advertisement -

ಅರ್ಥ ವ್ಯವಸ್ಥೆ ಬುಡಮೇಲು,

ಸಿಗದ ಕಪ್ಪು ಹಣ,

ನಿಲ್ಲದ ಭ್ರಷ್ಟಾಚಾರ,

ಉದ್ದಿಮೆಗಳಿಗೆ ಬೀಗ,

ಆಗದ ಕ್ಯಾಶ್ಲೆಸ್ ಎಕಾನಮಿ,

ದೇಶ ಅಪ್ರಬುದ್ಧರ ಕೈಗೆ ಸಿಕ್ಕು ನಲುಗುತ್ತಿರುವುದಕ್ಕೆ ಸಾಕ್ಷಿ ಇದು ಎಂದು ಕಾಂಗ್ರೆಸ್ ಕಿಡಿಕಾರಿದೆ.

ಖೋಟಾ ನೋಟಿನ ಹಾವಳಿ ನಿಯಂತ್ರಿಸಲು ನೋಟ್ ಬ್ಯಾನ್ ಎಂದಿತ್ತು ಬಿಜೆಪಿ ಬಡವರ ಬದುಕು ಕಸಿದ ನೋಟ್ ಬ್ಯಾನ್‌ ನಿಂದ ಖೋಟಾ ನೋಟಿನ ಹಾವಳಿ ನಿಯಂತ್ರಿಸಿಬಿಟ್ಟೆವು ಎಂದು ಎದೆ ತಟ್ಟಿ ಹೇಳಿಕೊಳ್ಳಲಿದೆಯೇ ಬಿಜೆಪಿಯವರೇ?

2021-22 ರಲ್ಲಿ – 2.30 ಲಕ್ಷ

2020- 21 ರಲ್ಲಿ – 2.08 ಲಕ್ಷ

2019 – 20 ರಲ್ಲಿ 2.96 ಲಕ್ಷ

ನಕಲಿ ನೋಟು ಪತ್ತೆಯಾಗಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Join Whatsapp