ರಾಜ್ಯಸಭೆಯಲ್ಲಿ ನ್ಯಾಯ ಪಾಲಿಸುವಂತೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡುಗೆ TMC ಒತ್ತಾಯ

Prasthutha|

ನವದೆಹಲಿ : ಅಶಿಸ್ತಿನ ಹೆಸರಲ್ಲಿ ಸಂಸದರ ಮೇಲೆ ಕ್ರಮ ಕೈಗೊಳ್ಳಲಿರುವ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಟಿ.ಎಮ್.ಸಿ ಸಂಸದ ಮಹುವಾ ಮೊಯಿತ್ರ ಅವರು ಅಧ್ಯಕ್ಷರನ್ನು ತಟಸ್ಥವಾಗಿರುವಂತೆ ಒತ್ತಾಯಿಸಿದ್ದಾರೆ. ಉಪರಾಷ್ಟ್ರಪತಿಯು ನ್ಯಾಯಯುತವಾಗಿರಲು ಒತ್ತಾಯಿಸಿದರು. ಮಾತ್ರವಲ್ಲದೆ ಪ್ರಧಾನ ಮಂತ್ರಿ, ಗೃಹ ಸಚಿವರನ್ನು ಸಂಸತ್ತಿಗೆ ಗೈರುಹಾಜರಾಗಿದ್ದನ್ನು ಮತ್ತು ಪೆಗಾಸೆಸ್ ಸ್ಪೈವೇರ್ ಕದ್ದಾಲಿಕೆ ನಡೆಸಿರುವುದರ ಕುರಿತು ಕೇಂದ್ರ ಚರ್ಚೆಗೆ ಅವಕಾಶ ನೀಡದಿರುವುದರ ಬಗ್ಗೆ ಅವರಲ್ಲಿ ಪ್ರಶ್ನಿಸಬೇಕಾಗಿದೆಯೆಂದು ಮೊಯಿತ್ರ ಹೇಳಿದ್ದಾರೆ.

- Advertisement -

ವೆಂಕಯ್ಯ ನಾಯ್ಡು ಅವರು ಮೇಲ್ಮನೆಯಲ್ಲಿ ವಿರೋಧ ಪಕ್ಷದ ಸಂಸದರ ಅಶಿಸ್ತಿನ ವರ್ತನೆಯ ಹೆಸರಲ್ಲಿ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಟಿ.ಎಮ್.ಸಿ ಸಂಸದೆ ಮೊಯಿತ್ರಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಮುಂಗಾರು ಅಧಿವೇಶದನದ ಹಿನ್ನೆಲೆಯಲ್ಲಿ ಗುರುವಾರ ಆಡಳಿತ ಮತ್ತು ವಿರೋಧ ಪಕ್ಷ ಗಳ ನಡುವೆ ಭಾರೀ ಕೋಲಾಹಲ ನಡೆದು ಕಲಾಪವನ್ನು ಮುಂದೂಡಲಾಗಿತ್ತು. ಮಾತ್ರವಲ್ಲದೆ ವಿರೋಧ ಪಕ್ಷದ ಮೇಜಿನ ಮೇಲೆ ಹತ್ತಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಿಪಡಿಸಿದ್ದರು. ವಿರೋಧ ಪಕ್ಷದ ನಾಯಕರ ಈ ನಡೆಯನ್ನು ಸರ್ಕಾರ ಪ್ರಶ್ನಿಸಿತ್ತು.

ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುತ್ತಾ, ಮೇಲ್ಮನೆಯಲ್ಲಿ ಮಹಿಳಾ ಸಂಸದರ ಮೇಲೆ ಮಾರ್ಷಲ್ ಗಳು ಹಲ್ಲೆ ನಡೆಸಿರುರುವುದು ದುರಂತ. ರಾಜ್ಯಸಭೆಯಲ್ಲಿ ಇರುವ ಮಾರ್ಷಲ್‌ಗಳ ಸಂಖ್ಯೆ ಸಂಸದರ ಸಂಖ್ಯೆಯನ್ನು ಮೀರಿದೆ ಮತ್ತು ಸಂಸತ್ತಿನಲ್ಲಿಯೂ ಮಹಿಳೆಯರು ಅಸುರಕ್ಷಿತರಾಗಿದ್ದಾರೆ ಎಂದು ವಿಷಾದಿಸಿದರು. ಪ್ರತಿಪಕ್ಷದ ತೀವ್ರ ಪ್ರತಿರೋಧದಿಂದಾಗಿ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.



Join Whatsapp