ದಲಿತನನ್ನು ಸಾಷ್ಟಾಂಗ ನಮಸ್ಕಾರಕ್ಕೆ ಬಲವಂತಪಡಿಸಿದ ಘಟನೆಗೆ ಹೊಸ ತಿರುವು: ವೀಡಿಯೋದ ಮೂಲಕ ಸತ್ಯ ಬಹಿರಂಗ

Prasthutha|

ಕೊಯಮತ್ತೂರು: ಮೇಲ್ಜಾತಿ ವ್ಯಕ್ತಿಯೊಬ್ಬರು ದಲಿತ ಸಮುದಾಯದ ಗ್ರಾಮ ಸಹಾಯಕರನ್ನು ಸಾಷ್ಟಾಂಗ ನಮಸ್ಕರಿಸಿ ಕ್ಷಮೆ ಕೋರಿಕೆಗೆ ಬಲವಂತಪಡಿಸಿದ ಘಟನೆ ವರದಿಯಾಗಿತ್ತು. ಈ ಘಟನೆಯು ಕೊಯಮತ್ತೂರಿನ ಒಟ್ಟಾರಪಾಳ್ಯಂನ ಗ್ರಾಮ ಕಚೇರಿಯಲ್ಲಿ ಆಗಸ್ಟ್ 6 ರಂದು ನಡೆದಿತ್ತು. ಘಟನೆಯ ಮೊದಲು ಗ್ರಾಮ ಸಹಾಯಕ ಮೇಲ್ಜಾತಿ ವ್ಯಕ್ತಿಯ ಮೇಲೆ ಹಲ್ಲೆ ನಡೆದಿರುವ ವೀಡಿಯೋ ಈಗ ಬಹಿರಂಗವಾಗಿದ್ದು, ಪ್ರಕರಣವು ಹೊಸ ತಿರುವು ಪಡೆದಿದೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಬಹಿರಂಗವಾದ ವೀಡಿಯೋದ ಆಧಾರದಲ್ಲಿ ಕಂದಾಯ ಇಲಾಖೆಯು ಗ್ರಾಮ ಸಹಾಯಕರಾದ ಮುತ್ತುಸ್ವಾಮಿ ಮತ್ತು ಗ್ರಾಮ ಆಡಳಿತಾಧಿಕಾರಿ ವಿ. ಕಲೈಸೆಲ್ವಿ ಅವರನ್ನು ಜಿಲ್ಲೆಯ ಬೇರೆ ಗ್ರಾಮ ಕಚೇರಿಗೆ ವರ್ಗಾಯಿಸಿ ಆದೇಶ ಹೊರಡಿಸಿದೆ. ಮಾತ್ರವಲ್ಲದೆ ಹೊಸ ವೀಡಿಯೋ ಸಾಕ್ಷದ ಆಧಾರದಡಿಯಲ್ಲಿ ಗ್ರಾಮ ಸಹಾಯಕ ಮತ್ತು ಆಡಳಿತಾಧಿಕಾರಿ ವಿರುದ್ಧ ಕ್ರಿಮಿನಲ್ ಮತ್ತು ಶಿಸ್ತಿನ ಕ್ರಮವನ್ನು ಆರಂಭಿಸಲಾಗುವುದೆಂದು ಜಿಲ್ಲಾಧಿಕಾರಿ ಜಿ.ಎಸ್. ಸಮೀರನ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಹಿಂದೆ ಗ್ರಾಮ ಸಹಾಯಕ ಮುತ್ತುಸ್ವಾಮಿಯವರು ಗೋಪಾಲಸ್ವಾಮಿ ಎಂಬ ಮೇಲ್ಜಾತಿಯ ವಿರುದ್ಧ ಜಾತಿ ನಿಂದನೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಅಣ್ಣೂರು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಭೂ ದಾಖಲೆಯಲ್ಲಿನ ಸಮಸ್ಯೆಗಳ ಕುರಿತು ಗೋಪಾಲಸ್ವಾಮಿ ವಿಎ ಮತ್ತು ವಿಎಒ ಅವರೊಂದಿಗೆ ಗೋಪಾಲಸ್ವಾಮಿ ಜಗಳವಾಡಿದ್ದರು. ಘಟನೆ ಹಿನ್ನೆಲೆಯಲ್ಲಿ ನೆಲಕ್ಕೆ ಬಿದ್ದ ಗೋಪಾಲಸ್ವಾಮಿ ಅವರು ಈ ಇಬ್ಬರ ವಿರುದ್ಧ ಮೇಲ್ಜಾತಿಯ ವ್ಯಕ್ತಿಯನ್ನು ತಳ್ಳಿ ಕೆಳಗೆ ಬೀಳಿಸಿದ ಹಿನ್ನೆಲೆಯಲ್ಲಿ ಗೋಪಾಲಸ್ವಾಮಿ ಅವರಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದರು ಎಂದು ದೂರಿದ್ದರು.

- Advertisement -

ಪ್ರಸಕ್ತ ಬಹಿರಂಗವಾಗಿರುವ ವೀಡಿಯೋದ ಆಧಾರದಲ್ಲಿ ಗೋಪಾಲಸ್ವಾಮಿಯ ವಿರುದ್ಧ ಪ್ರಕರಣ ಕೈಬಿಟ್ಟು, ವಿಎ ಮತ್ತು ವಿಎಒ ಅವರ ಮೇಲೆ ಪ್ರಕರಣ ದಾಖಲಿಸಬೇಕೆಂದು ತಮಿಳಗ ವಿವಸೈ ಸಂಗಮವು ಪೊಲೀಸರನ್ನು ಒತ್ತಾಯಿಸಿದೆ. ಈ ಸಂಬಂಧ ಆಗಸ್ಟ್ 6 ರಂದು ಗೋಪಾಲಸ್ವಾಮಿ ಯವರು ವಿಎ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಅಣ್ಣೂರು ಠಾಣೆಗೆ ದೂರು ದಾಖಲಿಸಿದ್ದರು.

Join Whatsapp