ಟೆನಿಸ್ ತಾರೆ ಲಿಯಾಂಡರ್ ಪೇಸ್ ತೃಣಮೂಲ ಕಾಂಗ್ರೆಸ್ ಸೇರ್ಪಡೆ

Prasthutha|

ಪಣಜಿ: ಖ್ಯಾತ ಟೆನಿಸ್ ತಾರೆ ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.

- Advertisement -


ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ ಪೇಸ್ ಪೇಸ್ TMCಗೆ ಸೇರಿದ್ದಾರೆ.
ಪೇಸ್ ತೃಣಮೂಲ ಕಾಂಗ್ರೆಸ್ ಸೇರ್ಪಡೆಯನ್ನು ಮುಖ್ಯಮಂತ್ರಿ ಅಧಿಕೃತವಾಗಿ ಘೋಷಿಸಿದ್ದು, “ಪೇಸ್ ತನ್ನ ಕಿರಿಯ ಸಹೋದರನಂತೆ” ಎಂದು ಹೇಳಿದ್ದಾರೆ.


ಮಮತಾ ಅವರ ಗೋವಾ ಭೇಟಿಯ ಸಂದರ್ಭದಲ್ಲಿ ಚಲನಚಿತ್ರ ತಾರೆ ನಫೀಸಾ ಅಲಿ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

- Advertisement -


ಮಮತಾ ಬ್ಯಾನರ್ಜಿ ಗುರುವಾರ ಸಂಜೆ ಗೋವಾಕ್ಕೆ ಆಗಮಿಸಿದ್ದಾರೆ. ಮಮತಾ ಬ್ಯಾನರ್ಜಿ ಮೂರು ದಿನಗಳ ಭೇಟಿಗಾಗಿ ಗೋವಾಕ್ಕೆ ಆಗಮಿಸಿದ್ದಾರೆ. ಗುರುವಾರ ಸಂಜೆ 5.30ಕ್ಕೆ ಗೋವಾಕ್ಕೆ ಆಗಮಿಸಿದ ಮುಖ್ಯಮಂತ್ರಿ ಅವರನ್ನು ತೃಣಮೂಲ ಸಂಸದ ಡೆರಿಕ್ ಓಬ್ರಿಯಾನ್ ಹಾಗೂ ಇತರ ಪ್ರಮುಖ ನಾಯಕರು ಬರಮಾಡಿಕೊಂಡಿದ್ದಾರೆ. ಶುಕ್ರವಾರ ಸಂಜೆ ಸಮುದಾಯ ಪ್ರತಿನಿಧಿಗಳೊಂದಿಗೆ ಮಮತಾ ಬ್ಯಾನರ್ಜಿ ಸಭೆ ನಡೆಸಲಿದ್ದಾರೆ.

ಬಿಜೆಪಿ ಆಡಳಿತವಿರುವ ಗೋವಾ ಮತ್ತು ತ್ರಿಪುರಾ ರಾಜ್ಯಗಳು ತೃಣಮೂಲ ಕಾಂಗ್ರೆಸ್ ನ ಮುಂದಿನ ಗುರಿಯಾಗಿದೆ.

Join Whatsapp