ಪ.ಬಂ. | ಟಿಎಂಸಿ ಕಾರ್ಯಕರ್ತನ ಮನೆಗೆ ಬಾಂಬ್ ಎಸೆತ; ಬಿಜೆಪಿ – ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ

Prasthutha|

ಕೊಲ್ಕತಾ : ಪಶ್ಚಿಮ ಬಂಗಾಳದ ಪಶ್ಚಿಮ ಬರ್ದಾಮನ್ ಜಿಲ್ಲೆಯ ದುರ್ಗಾಪುರದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಟಿಎಂಸಿ ಕಾರ್ಯಕರ್ತರೊಬ್ಬರ ಮನೆ ಮೇಲೆ ಬಾಂಬ್ ಎಸೆದಿರುವ ಹಿನ್ನೆಲೆಯಲ್ಲಿ, ಘರ್ಷಣೆ ನಡೆದಿದೆ.

- Advertisement -

ಪ್ರದೇಶದಲ್ಲಿ ತಾನು ಜನಪ್ರಿಯನಾಗಿರುವುದಕ್ಕೆ ಆಕ್ರೋಶಿತರಾಗಿರುವ ಬಿಜೆಪಿ ಕಾರ್ಯಕರ್ತರು ಈ ಘಟನೆಗೆ ಕಾರಣಕರ್ತರು ಎಂದು ಟಿಎಂಸಿ ಕಾರ್ಯಕರ್ತರು ತಿಳಿಸಿರುವುದಾಗಿ ವರದಿಯೊಂದು ತಿಳಿಸಿದೆ.

“ನಾವು ನಮ್ಮ ಮನೆಯಲ್ಲಿ ಕುಳಿತುಕೊಂಡಿದ್ದಾಗ ಫೈಯರ್ ಬಾಂಬ್ ನಮ್ಮ ನಡುವೆ ತೂರಿ ಬಂತು. ಅದರಿಂದಾಗಿ ದನವೊಂದಕ್ಕೆ ಗಾಯಗಳಾಗಿವೆ. ನಾನು ಬಿಜೆಪಿ ಕಾರ್ಯಕರ್ತನಾಗಿರುವುದಕ್ಕೆ ಮತ್ತು ಇಲ್ಲಿ ಜನಪ್ರಿಯನಾಗಿರುವುದಕ್ಕೆ ಅವರು ಕೋಪೋದ್ರಿಕ್ತರಾಗಿದ್ದಾರೆ ಎಂದೆನಿಸುತ್ತಿದೆ’’ ಎಂದು ಟಿಎಂಸಿ ಕಾರ್ಯಕರ್ತ ತಿಳಿಸಿದ್ದಾರೆ.

- Advertisement -

ನಮ್ಮ ಹುಡುಗರು ಬೆಂಕಿ ನೋಡಿ ಅದನ್ನು ನಂದಿಸಲೆಂದು ಹೋಗಿದ್ದರು. ರಾಜ್ಯದಲ್ಲಿ ಏನೇ ನಡೆದರೂ ಅದನ್ನು ಬಿಜೆಪಿ ತಲೆಗೆ ಕಟ್ಟುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಘಟನೆಗೆ ಸಂಬಂಧಿಸಿ ಸ್ಪಷ್ಟನೆ ನೀಡಿದ್ದಾರೆ.     

Join Whatsapp