ತೊಕ್ಕೊಟ್ಟು: ಹಝ್ರತ್ ಟಿಪ್ಪು ಸುಲ್ತಾನ್ ಜನ್ಮದಿನ ಆಚರಣೆ

Prasthutha|

ಮಂಗಳೂರು: ಸಾಮಾನ್ಯ ಜನರಿಗೆ ಟಿಪ್ಪುವಿನಿಂದ ಯಾವುದೇ ತೊಂದರೆ ಆಗಿಲ್ಲ. ದೇಶದ ಮೇಲೆ ಅತೀವ ಪ್ರೀತಿ ಹೊಂದಿದ್ದ ಅವರು, ದೇಶದ ವಿರುದ್ಧ ನಿಲ್ಲುತ್ತಿದ್ದ ಯಾವು ದೇ ಧರ್ಮದ ಜನರಿಗೂ ಕಠಿಣ ಶಿಕ್ಷೆ ಕೊಡುವ ಸ್ವಭಾವ ಹೊಂದಿದ್ದರು ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

- Advertisement -


ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಜಿಲ್ಲಾ ಸಮಿತಿ ಆಶ್ರಯದಲ್ಲಿ ಬುಧವಾರ ತೊಕ್ಕೊಟ್ಟು ಸಮೀಪದ ಬಬ್ಬುಕ ಟ್ಟೆಯಲ್ಲಿ ನಡೆದ ಹಝ್ರತ್ ಟಿಪ್ಪು ಸುಲ್ತಾನ್ ಅವರ 272ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಟಿಪ್ಪುವಿನ ಇತಿಹಾಸ ಅರಿಯಬೇಕಾದರೆ ಕೊಲ್ಲೂರು ಶೃಂಗೇರಿ, ಇತಿಹಾಸ ಪ್ರಸಿದ್ಧ ದೇವಸ್ಥಾನಕ್ಕೆ ಹೋಗಬೇಕು. ಯಾರು ಏನು ಹೇಳಿದರೂ ಇತಿಹಾಸ ತಿರುಚಲು ಅಸಾಧ್ಯ, ರಾಜ್ಯದಲ್ಲಿರುವ ಇತಿಹಾಸ ಪ್ರಸಿದ್ಧ ತಾಣಗ ಳು, ಇಂಗ್ಲೆಂಡ್ ಮ್ಯೂಸಿಯಂನಲ್ಲಿರುವ ದಾಖಲೆಗಳನ್ನು ಮರೆಮಾಚಲು ಯಾರಿಂದ ಲೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಟಿಪ್ಪು ಸುಲ್ತಾನರ ಇತಿಹಾಸ ಪರಿಚಯಿಸುವುದು ಅಗತ್ಯ ಎಂದು ಹೇಳಿದರು ‌.


ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇ ದಿಕೆಯ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅಧ್ಯಕ್ಷತೆ ವಹಿಸಿ, ಇಂದು ನಾವು ಸಮುದಾಯ ಸಮಾಜದ ಬದಲು ಚಿಂತಿಸದೆ ಕೇವಲ ಕೋಮು ಸಂಬಂಧಿತ ವಿಚಾರಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವುದು, ದ್ವೇಷ ಸಾಧನೆಯಿಂದಾಗಿ ಅಶಾಂತಿ ಸೃಷ್ಟಿಗೆ ಕಾರಣ ವಾಗಿದೆ ಎಂದು ಹೇಳಿದರು.

- Advertisement -


ಕಾರ್ಯಕ್ರಮದಲ್ಲಿ ಉಳ್ಳಾಲ‌ ಪುರಸಭೆಯ ಸಿಬ್ಬಂದಿ ಅಂಗವೈಕಲ್ಯ ಹೊಂದಿರುವ ಅಬ್ಬಾ ಸ್ ಉಳ್ಳಾಲ‌್, ನಾಗೇಶ್ ಕುಲಾಲ್, ಜಿಲ್ಲಾ ಯುವಕಾಂಗ್ರೆಸ್ ಕಾರ್ಯದರ್ಶಿ ಸಂಜನಾ ಛಲವಾದಿ ಇವರನ್ನು ಸನ್ಮಾನಿಸಲಾಯಿತು. ಉಳ್ಳಾಲ‌ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ‌, ಉದ್ಯಮಿ ಯು.ಎಂ.ಹಸನಬ್ಬ ಬಬ್ಬುಕಟ್ಟೆ, ಉಳ್ಳಾಲ‌ ನಗರಸಭೆಯ ಮಾಜಿ ಸದಸ್ಯರಾದ ಮುಸ್ತಫಾ ಅಬ್ದುಲ್ಲಾ, ಉಸ್ಮಾನ್ ಕಲ್ಲಾಪು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಸಮಾಜ ಸೇವಕ ಇಬ್ರಾಹಿಂ ಕರೀಂ, ಮುನ್ನೂ ರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಲ್ ಫ್ರೆಡ್ ಡಿಸೋಜ, ಮಹಾವೇದಿ ಕೆಯ ಉಪಾಧ್ಯಕ್ಷ ವಿಷ್ಣು ಭಟ್, ಪ್ರದಾನ ಕಾರ್ಯದರ್ಶಿ ನಝೀರ್ ಬಾರ್ಲಿ, ಮಾಜಿ ಅಧ್ಯಕ್ಷ ಮುನೀರ್ ಅಸೈ ಗೋಳಿ, ಅಬ್ದುಲ್ ಅಝೀಝ್ ಪುಣಚ ಮೊದಲಾದವರು ಉಪಸ್ಥಿತರಿದ್ದರು.
ಆರ್.ಕೆ.ಮದನಿ ಅಮ್ಮೆಂಬಳ ಸ್ವಾಗತಿಸಿದರು. ಸಲಾಂ ಮದನಿ ಕಾರ್ಯಕ್ರಮ ನಿರೂಪಿಸಿ ದರು..

Join Whatsapp