ಗಝ್ವಾ ಎ ಹಿಂದ್ ನೊಂದಿಗೆ ಪಿಎಫ್ ಐಗೆ ಸಂಬಂಧ ಕಲ್ಪಿಸಲು ಟೈಮ್ಸ್ ನೌ ಪ್ರಯತ್ನ: ಕಾನೂನು ಕ್ರಮದ ಎಚ್ಚರಿಕೆ ನೀಡಿದ ಅನೀಸ್ ಅಹ್ಮದ್

Prasthutha|

ನವದೆಹಲಿ: ಬಿಹಾರದ “ಗಝ್ವಾ ಎ ಹಿಂದ್” ಎಂಬುದು ಪಿಎಫ್ ಐನ ಯೋಜನೆ ಎಂದು ಸ್ವಯಂ ತೀರ್ಪು ನೀಡಿರುವ ಟೈಮ್ಸ್ ನೌ ವಾಹಿನಿಯ ನಡೆಯನ್ನು ಪಿಎಫ್ ಐ ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್ ತೀವ್ರವಾಗಿ ಖಂಡಿಸಿದ್ದು, ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

- Advertisement -

ಇತ್ತೀಚೆಗಷ್ಟೇ ಸಾಮಾಜಿಕ ಸೇವಾ ಸಂಘಟನೆಯಾಗಿರುವ ‘ಎಂಪವರ್ ಇಂಡಿಯಾ ಫೌಂಡೇಶನ್’ ಗೂ ಪಾಪ್ಯುಲರ್ ಫ್ರಂಟ್ ಗೂ  ಸಂಬಂಧ ಕಲ್ಪಿಸಿ, ಇವು ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಕಪೋಲಕಲ್ಪಿತ ಸುದ್ದಿಯನ್ನು ಬಿಹಾರ ಪೊಲೀಸಲು ಕೆಲವು ಮಾಧ್ಯಮಗಳ ಮೂಲಕ ಹರಿಯಬಿಟ್ಟಿದ್ದರು. ಈ ಷಡ್ಯಂತರವನ್ನು ತೀವ್ರವಾಗಿ ಖಂಡಿಸಿದ್ದ ಪಾಪ್ಯುಲರ್ ಫ್ರಂಟ್, ಇದನ್ನು ಕಾನೂನು ರೀತಿಯಲ್ಲಿ ಎದುರಿಸುವುದಾಗಿ ತಿಳಿಸಿತ್ತು.

 ಇದರ ಬೆನ್ನಲ್ಲೇ ಅದೇ ರೀತಿಯ ಸಂಚನ್ನು ಗಝ್ವಾ ಎ ಹಿಂದ್ ಹೆಸರಿನಲ್ಲಿ ನಡೆಸಲಾಗಿದೆ ಎಂದು ಅನೀಸ್ ಅಹ್ಮದ್ ಆರೋಪಿದ್ದಾರೆ.

- Advertisement -

ಬಿಹಾರದ ಗಝ್ವಾ ಎ ಹಿಂದ್ ಹಿಂದಿರುವ ಸಂಚು ಭೇದಿಸಲಾಗಿದ್ದು, ಇದು ಪಿಎಫ್ ಐ ಯೋಜನೆ, ಇಂತಹ ತೀವ್ರಗಾಮಿಗಳನ್ನು ಮೋದಿ ಹೇಗೆ ಎದುರಿಸುತ್ತಾರೆ? ಎಂದು ಟೈಮ್ಸ್ ನೌ ಸುದ್ದಿವಾಹಿನಿ ಪ್ರಸಾರ ಮಾಡಿತ್ತು. ಅದರ ವೆಬ್ ಸೈಟ್ ನಲ್ಲಿ ಈ ಕುರಿತ ಸುದ್ದಿ ಪ್ರಕಟವಾಗಿತ್ತು. ಬಳಿಕ ಅದನ್ನು ಡಿಲೀಟ್ ಮಾಡಲಾಗಿದೆ.

ಗಝ್ವಾ ಎ ಹಿಂದ್ ನೊಂದಿಗೆ ಪಿಎಫ್ ಐ ಸಂಬಂಧದ ಬಗ್ಗೆ ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಟೈಮ್ಸ್ ನೌನವರು ಮಾತ್ರ ಪಿಎಫ್ ಐ ಕುರಿತು ತಮ್ಮದೇ ಆದ ಕಥೆಯನ್ನು ಸೃಷ್ಟಿಸಿದ್ದಾರೆ ಮತ್ತು ಇದು ಪಿಎಫ್ ಐ ಯೋಜನೆ ಎಂದು ತೀರ್ಪು ಸಹ ನೀಡಿದ್ದಾರೆ ಎಂದು ಅನೀಸ್ ಅಹ್ಮದ್ ತಿಳಿಸಿದ್ದಾರೆ.

ರಿಪಬ್ಲಿಕ್ ನಂತೆಯೇ ಶೀಘ್ರದಲ್ಲೇ ಟೈಮ್ಸ್ ನೌ ಕಾನೂನು ಕ್ರಮವನ್ನು ಎದುರಿಸಲಿದೆ ಅನಿಸ್ ಅಹ್ಮದ್ ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.

Join Whatsapp