ನವದೆಹಲಿ: ಬಿಹಾರದ “ಗಝ್ವಾ ಎ ಹಿಂದ್” ಎಂಬುದು ಪಿಎಫ್ ಐನ ಯೋಜನೆ ಎಂದು ಸ್ವಯಂ ತೀರ್ಪು ನೀಡಿರುವ ಟೈಮ್ಸ್ ನೌ ವಾಹಿನಿಯ ನಡೆಯನ್ನು ಪಿಎಫ್ ಐ ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್ ತೀವ್ರವಾಗಿ ಖಂಡಿಸಿದ್ದು, ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಸಾಮಾಜಿಕ ಸೇವಾ ಸಂಘಟನೆಯಾಗಿರುವ ‘ಎಂಪವರ್ ಇಂಡಿಯಾ ಫೌಂಡೇಶನ್’ ಗೂ ಪಾಪ್ಯುಲರ್ ಫ್ರಂಟ್ ಗೂ ಸಂಬಂಧ ಕಲ್ಪಿಸಿ, ಇವು ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಕಪೋಲಕಲ್ಪಿತ ಸುದ್ದಿಯನ್ನು ಬಿಹಾರ ಪೊಲೀಸಲು ಕೆಲವು ಮಾಧ್ಯಮಗಳ ಮೂಲಕ ಹರಿಯಬಿಟ್ಟಿದ್ದರು. ಈ ಷಡ್ಯಂತರವನ್ನು ತೀವ್ರವಾಗಿ ಖಂಡಿಸಿದ್ದ ಪಾಪ್ಯುಲರ್ ಫ್ರಂಟ್, ಇದನ್ನು ಕಾನೂನು ರೀತಿಯಲ್ಲಿ ಎದುರಿಸುವುದಾಗಿ ತಿಳಿಸಿತ್ತು.
ಇದರ ಬೆನ್ನಲ್ಲೇ ಅದೇ ರೀತಿಯ ಸಂಚನ್ನು ಗಝ್ವಾ ಎ ಹಿಂದ್ ಹೆಸರಿನಲ್ಲಿ ನಡೆಸಲಾಗಿದೆ ಎಂದು ಅನೀಸ್ ಅಹ್ಮದ್ ಆರೋಪಿದ್ದಾರೆ.
ಬಿಹಾರದ ಗಝ್ವಾ ಎ ಹಿಂದ್ ಹಿಂದಿರುವ ಸಂಚು ಭೇದಿಸಲಾಗಿದ್ದು, ಇದು ಪಿಎಫ್ ಐ ಯೋಜನೆ, ಇಂತಹ ತೀವ್ರಗಾಮಿಗಳನ್ನು ಮೋದಿ ಹೇಗೆ ಎದುರಿಸುತ್ತಾರೆ? ಎಂದು ಟೈಮ್ಸ್ ನೌ ಸುದ್ದಿವಾಹಿನಿ ಪ್ರಸಾರ ಮಾಡಿತ್ತು. ಅದರ ವೆಬ್ ಸೈಟ್ ನಲ್ಲಿ ಈ ಕುರಿತ ಸುದ್ದಿ ಪ್ರಕಟವಾಗಿತ್ತು. ಬಳಿಕ ಅದನ್ನು ಡಿಲೀಟ್ ಮಾಡಲಾಗಿದೆ.
ಗಝ್ವಾ ಎ ಹಿಂದ್ ನೊಂದಿಗೆ ಪಿಎಫ್ ಐ ಸಂಬಂಧದ ಬಗ್ಗೆ ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಟೈಮ್ಸ್ ನೌನವರು ಮಾತ್ರ ಪಿಎಫ್ ಐ ಕುರಿತು ತಮ್ಮದೇ ಆದ ಕಥೆಯನ್ನು ಸೃಷ್ಟಿಸಿದ್ದಾರೆ ಮತ್ತು ಇದು ಪಿಎಫ್ ಐ ಯೋಜನೆ ಎಂದು ತೀರ್ಪು ಸಹ ನೀಡಿದ್ದಾರೆ ಎಂದು ಅನೀಸ್ ಅಹ್ಮದ್ ತಿಳಿಸಿದ್ದಾರೆ.
ರಿಪಬ್ಲಿಕ್ ನಂತೆಯೇ ಶೀಘ್ರದಲ್ಲೇ ಟೈಮ್ಸ್ ನೌ ಕಾನೂನು ಕ್ರಮವನ್ನು ಎದುರಿಸಲಿದೆ ಅನಿಸ್ ಅಹ್ಮದ್ ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.