‘ಕಾಲವೇ ಪ್ರತಿಯೊಂದಕ್ಕೂ ಉತ್ತರಿಸಲಿದೆ’: ಐಟಿ ದಾಳಿಯ ಕುರಿತು ಪ್ರತಿಕ್ರಿಯಿಸಿದ ನಟ ಸೋನು ಸೂದ್

Prasthutha|

ಮುಂಬೈ: ಕಳೆದ ವಾರ ಆದಾಯ ತೆರಿಗೆ ಅಧಿಕಾರಿಗಳು ತನ್ನ ಸಂಸ್ಥೆಗಳಿಗೆ ದಾಳಿ ನಡೆಸಿದ ಕುರಿತು ಬಾಲಿವುಡ್ ನಟ ಸೋನು ಸೂದ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ ಪ್ರತಿಯೊಂದಕ್ಕೂ ಕಾಲವೇ ಉತ್ತರಿಸಲಿದೆ ಎಂದು ತಿಳಿಸಿದ್ದಾರೆ. ಮಾತ್ರವಲ್ಲ ಸೋನು ಅವರು ನಡೆಸುತ್ತಿರುವ ಸಂಸ್ಥೆಯಲ್ಲಿರುವ ಪ್ರತಿ ರುಪಾಯಿಗಳು ಜೀವ ಉಳಿಸಲು ಪ್ರಯತ್ನಿಸುತ್ತಿದೆ ಎಂಬ ಸಂದೇಶವನ್ನು ತನ್ನ ಟ್ವೀಟ್ ಜೊತೆ ಹಂಚಿಕೊಂಡ ನಟ, ರಾಜಕೀಯ ಪ್ರೇರಿತವಾಗಿ ತನ್ನ ಸಂಸ್ಥೆಯ ಮೇಲೆ ದಾಳಿ ನಡೆಸಿರುವ ಕುರಿತು ಐಟಿ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನ ಸಂಸ್ಥೆಯ ಪ್ರತಿ ರುಪಾಯಿಗಳು ಅಮೂಲ್ಯವಾದ ಜೀವ ಉಳಿಸಲು ಮತ್ತು ಅಗತ್ಯ ವಸ್ತುಗಳನ್ನು ಅರ್ಹರಿಗೆ ತಲುಪಿಸಲು ಹಾತೊರೆಯುತ್ತಿದೆ. ಮಾತ್ರವಲ್ಲ ಮಾನವೀಯ ಸೇವೆಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಬ್ರ್ಯಾಂಡ್ ಗಳನ್ನು ದಾನ ಮಾಡಲು ತನಗೆ ಪ್ರೋತ್ಸಾಹಿಸಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಕುಮ್ಮಕ್ಕಿನಿಂದ ನಡೆದಿರುವ ಈ ದಾಳಿಗೆ ಕಾಲವೇ ಉತ್ತರಿಸಲಿದೆ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

- Advertisement -

ಬಾಲಿವುಡ್ ನಟ ಸೋನು ಸೂದ್ ಅವರ ಸಂಸ್ಥೆಗೆ ದಾಳಿ ನಡೆಸಿರುವುದನ್ನು ಐಟಿ ಇಲಾಖೆ ಸಮರ್ಥಿಸಿದ್ದು, 20 ಕೋಟಿ ತೆರಿಗೆ ವಂಚನೆಯ ಆರೋಪದಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಅಧಿಕಾರಿಗಳು ತಿಳಿಸಿದರು.

- Advertisement -