ಉತ್ತರ ಪ್ರದೇಶದ ಬಿಜೆಪಿ ನಾಯಕನಿಗೆ ಐದು ಡೋಸ್ ಕೊರೋನಾ ಲಸಿಕೆ: ಅಚ್ಚರಿ ಮೂಡಿಸಿದ ಪ್ರಮಾಣಪತ್ರ !

Prasthutha|

ಲಖನೌ: ಉತ್ತರ ಪ್ರದೇಶದ ಬಿಜೆಪಿ ನಾಯಕರೊಬ್ಬರಿಗೆ ಐದು ಡೋಸ್ ಲಸಿಕೆ ನೀಡಲಾಗಿದ್ದು, ಆರನೇ ಡೋಸ್ ಶೀಘ್ರದಲ್ಲಿ ನೀಡಲಾಗುವುದು ಎಂದು ಆರೋಗ್ಯ ಇಲಾಖೆಯ ಪ್ರಮಾಣ ಪತ್ರದಲ್ಲಿ ಉಲ್ಲೇಖವಾಗಿದೆ.

- Advertisement -

ಈ ರೀತಿ ಐದನೇ ಡೋಸ್ ಪಡೆದಿರುವ ನಾಯಕ ಉತ್ತರ ಪ್ರದೇಶದ ಬೂತ್ ಸಂಖ್ಯೆ 79 ರ ಬಿಜೆಪಿ ಅಧ್ಯಕ್ಷ ರಾಂಪಾಲ್ ಸಿಂಗ್. ಇದನ್ನು ನೋಡಿ ಖುದ್ದು ಸಿಂಗ್ ಅವರಿಗೆ ಅಚ್ಚರಿಯಾಗಿದೆ. ಏಕೆಂದರೆ, ಅಸಲಿಗೆ ಅವರು ಪಡೆದಿರುವುದು ಎರಡು ಡೋಸ್ ಮಾತ್ರ. ಮಾರ್ಚ್ 16ರಂದು ಒಂದನೇ ಡೋಸ್ ಹಾಗೂ ಎರಡನೇ ಡೋಸ್ ನ್ನು ಮೇ 8ರಂದು ಪಡೆದಿದ್ದಾರೆ. ಆದರೆ ಲಸಿಕೆ ಪ್ರಮಾಣ ಪತ್ರದಲ್ಲಿ ಮಾತ್ರ ಐದು ಡೋಸ್ ಪಡೆದಿರುವುದು ದಾಖಲಾಗಿದೆ.

ಇವರು ತಮಗೆ ಹಾಕಿರುವ ಲಸಿಕೆ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವ ವೇಳೆ ಈ ಎಡವಟ್ಟು ಗೊತ್ತಾಗಿದೆ. ಇದು ಆರೋಗ್ಯ ಇಲಾಖೆ ಮಾಡಿರುವ ಎಡವಟ್ಟು ಎಂದು ರಾಂಪಾಲ್ ಸಿಂಗ್ ಆರೋಪಿಸಿದರೆ, ಇದು ನಮ್ಮಿಂದಾಗಿರುವ ಎಡವಟ್ಟು ಅಲ್ಲ, ಬದಲಿಗೆ ಯಾರೋ ಕಿಡಿಗೇಡಿಗಳು ಮಾಡಿರುವುದು ಎಂದು ಆರೋಗ್ಯ ಇಲಾಖೆ ಹೇಳಿದೆ.

Join Whatsapp