ಭಾರತದಲ್ಲಿ ಮತ್ತೆ ಟಿಕ್ ಟಾಕ್ ? । ಬೆಂಗಳೂರು ಮೂಲದ ಕಂಪೆನಿಯಿಂದ ಖರೀದಿಗೆ ಯತ್ನ

Prasthutha|

ನಿಷೇಧಕ್ಕೂ ಮುನ್ನ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಅತಿಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದ ಟಿಕ್ ಟಾಕ್ ಭಾರತಕ್ಕೆ ಮತ್ತೆ ಮರಳುವ ಸಾಧ್ಯತೆಯಿದೆ. ಬೆಂಗಳೂರು ಮೂಲದ ಖ್ಯಾತ ಟೆಕ್ ಸಂಸ್ಥೆಯಾಗಿರುವ ‘ಗ್ಲಾನ್ಸ್ ಡಿಜಿಟಲ್‌ ಎಕ್ಸ್‌ ಪೀರಿಯನ್ಸ್‌’  ಟಿಕ್ ಟಾಕ್ ಖರೀದಿ ಮಾಡುವ ಮಾತುಗಳು ಕೇಳಿ ಬರುತ್ತಿದೆ.

- Advertisement -

ಟಿಕ್‌‌ ಟಾಕ್‌ ನ ಭಾರತೀಯ ವಿಭಾಗವನ್ನು ಖರೀದಿಸಲು ಬೆಂಗಳೂರು ಮೂಲದ ‘ಗ್ಲಾನ್ಸ್‌’ ಸಂಸ್ಥೆ ಮಾತುಕತೆ ನಡೆಸುತ್ತಿದೆ. ಟಿಕ್‌ ಟಾಕ್‌ ನ ಮಾತೃ ಸಂಸ್ಥೆಯಾದ ಚೀನಾ ಮೂಲದ ‘ಬೈಟ್‌ ಡ್ಯಾನ್ಸ್’ ಜೊತೆಗೆ ಮಾತುಕತೆ ನಡೆಸುತ್ತಿದೆ ಎಂದು ‘ಬ್ಲೂಮ್‌ ಬರ್ಗ್‌’ ವರದಿ ಮಾಡಿದೆ. ವರದಿಯ ಪ್ರಕಾರ, ಜಪಾನ್‌ ಮೂಲದ ಸಾಫ್ಟ್‌ ಬ್ಯಾಂಕ್‌ ಗ್ರೂಪ್‌ ಮಾತುಕತೆ ಆರಂಭಿಸಿದೆ. ಇದು ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ‘ಗ್ಲಾನ್ಸ್‌ ಡಿಜಿಟಲ್‌ ಎಕ್ಸ್ ಪೀರಿಯನ್ಸ್‌’ನ ಮಾತೃ ಸಂಸ್ಥೆ ‘ಇನ್‌ ಮೊಬಿ’ ಮತ್ತು ‘ಬೈಟ್‌ ಡ್ಯಾನ್ಸ್‌’ ಎರಡರಲ್ಲೂ ಜಪಾನ್‌ ಮೂಲದ ಸಾಫ್ಟ್‌ ಬ್ಯಾಂಕ್‌ ಹೂಡಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಾಫ್ಟ್‌ ಬ್ಯಾಂಕ್‌ ಈ ಮಾತುಕತೆಗೆ ಒಂದು ಉತ್ತಮ ವೇದಿಕೆಯನ್ನು ಒದಗಿಸಿದೆ.

ಜೂನ್ 29 ರಿಂದ ಭಾರತದಲ್ಲಿ ಈ ಚೀನಿ ಆ್ಯಪ್ ಅಧಿಕೃತವಾಗಿ ನಿಷೇಧಕ್ಕೆ ಒಳಗಾಗಿದೆ. Tik Tok ಬ್ಯಾನ್ ಕೆಲವರಿಗೆ ಸಂತೋಷ ನೀಡಿದರೆ ಇನ್ನೂ ಕೆಲವರಿಗೆ ತೀವ್ರ ಬೇಸರವನ್ನುಂಟು ಮಾಡಿತ್ತು. ಟಿಕ್‌ ಟಾಕ್ ಆ್ಯಪ್ ಹೊಸ ರೂಪ ಪಡೆದು ಭಾರತಕ್ಕೆ ಬರಲಿದೆ ಎಂಬ ಗಾಳಿಸುದ್ದಿಗಳು ಕೂಡ ಹರಿದಾಡುತ್ತಿತ್ತು. ಪರ್ಯಾಯವಾಗಿ ಜೋಹೊ ಮತ್ತು ಚಿಂಗಾರಿ ಆ್ಯಪ್ ಗಳು ಬೆಳಕಿಗೆ ಬಂದಿತ್ತು. ಆದರೆ ಅದ್ಯಾವುದೋ ಟಿಕ್ ಟಾಕಿನ ಮಟ್ಟಿಗೆ ಜನಪ್ರಿಯತೆ ಹೊಂದಿಲ್ಲ.

- Advertisement -

ಟಿಕ್ ಟಾಕ್ ಮರಳುವಿಕೆಯ ಯಾವುದೇ ಒಪ್ಪಂದಕ್ಕೆ ಭಾರತೀಯ ಅಧಿಕಾರಿಗಳ ಅನುಮೋದನೆ ಅಗತ್ಯವಿರುವುದರಿಂದ ಆ ನಿಟ್ಟಿನಲ್ಲಿ ಗ್ಲಾನ್ಸ್ ಸಂಸ್ಥೆ ಈ ಡೀಲ್ ಬಗ್ಗೆ  ಏನೂ ಪ್ರತಿಕ್ರಿಯೆ ನೀಡಿಲ್ಲ.

Join Whatsapp