ಚಿಕ್ಕಮಗಳೂರು: ರಾಜ್ಯದಲ್ಲಿ ಹುಲಿ ಉಗುರು-ಚರ್ಮ ಇಟ್ಕೊಂಡವರಿಗೆ ಸಂಕಷ್ಟ ಎದುರಾಗಿದೆ. ಚಿತ್ರ ನಟರ, ರಾಜಕಾರಣಿಗಳ ಮಕ್ಕಳಿಗೂ, ಧಾರ್ಮಿಕ ನಾಯಕರಿಗೂ ಇದರ ಬಿಸಿ ತಟ್ಟಿದೆ. ಕೆಲವರು ತಮ್ಮದು ನಕಲಿ ಎಂದು ಹೇಳುತ್ತಾ ತುರ್ತಾಗಿ ನಕಲಿ ಕಲೆಕ್ಷನ್ ಮಾಡಿ ಅರಣ್ಯಾಧಿಕಾರಿಗಳಿಗೆ ಸಮರ್ಪಿಸಿ ಬಚಾವಾಗ್ತಾ ಇದ್ದಾರೆ. ಹುಲಿ ಚರ್ಮ ಹೊಂದಿರುವ ವಿನಯ್ ಗುರೂಜಿ ತಪಾಸಣೆಗೆ ಒಳಗಾಗಿ, ಸಬೂಬೂ ಹೇಳ್ತಾ ಇದ್ದಾರೆ. ಅಸಲಿ ಆ ಹುಲಿ ಚರ್ಮವನ್ನು ಸರ್ಕಾರಕ್ಕೆ ಹಸ್ತಾಂತರಿಸಿರೋದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ಚಿಕ್ಕ ಮಗಳೂರಿನಲ್ಲಿ ಇಬ್ಬರು ಅರ್ಚಕರು ಹುಲಿಯುಗುರು ಇಟ್ಕೊಂಡಿದಕ್ಕಾಗಿ ತನಿಖೆ ಎದುರಿಸುತ್ತಿದ್ದಾರೆ. ಇದೀಗ ಮತ್ತೊಬ್ಬರು ಧಾರ್ಮಿಕ ಮುಖಂಡರ ವಿರುದ್ಧ ಆರೋಪ ಕೇಳಿ ಬಂದಿದೆ.ಅದು ಚಿಕ್ಕಮಗಳೂರಿನ ದತ್ತಪೀಠದ ಶಾಖಾದ್ರಿ.
ಚಿಕ್ಕಮಗಳೂರಿನ ದತ್ತಪೀಠದ ಶಾಖಾದ್ರಿಯೂ ಹುಲಿ ಚರ್ಮದ ಮೇಲೆ ಕೂತಿರೋ ಫೋಟೊ ವೈರಲ್ ಆಗಿದೆ. ಶಾಖಾದ್ರಿ ಮೇಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ. ಮುಂದಾಗಿದ್ದು ಯಾರು ಗೊತ್ತಾ? ಅದು ಮಾಜಿ ಶಾಸಕ ಸಿಟಿ ರವಿ, ಶಾಸಕ ಸುನಿಲ್ ಕುಮಾರ್ ಮೇಲೆ ಮುನಿಸಿಕೊಂಡು ಬುಸುಗುಟ್ಟುತ್ತಿರುವ ಪ್ರಮೋದ್ ಮುತಾಲಿಕರ ಶ್ರೀರಾಮಸೇನೆ.
ದತ್ತಪೀಠದಲ್ಲಿ ಅನಧಿಕೃತವಾಗಿ ವಾಸವಿರೋ ಶಾಖಾದ್ರಿ ಅವರ ಬಳಿಯೂ ಹುಲಿ ಚರ್ಮವಿದೆ. ಅವರ ಮೇಲೂ ಸೂಕ್ತ ಕ್ರಮ ಕೈಗೊಳ್ಳಲುವಂತೆ ಡಿ.ಎಫ್.ಓ.ಗೆ ಶ್ರೀರಾಮಸೇನೆ ಜಿಲ್ಲಾ ಮನವಿ ನೀಡಲಿದೆ ಎಂದು ತಿಳಿದು ಬಂದಿದೆ.